Visit Channel

ನನ್ನ ಕೈ, ಬರವಣೆಯನ್ನು ಕಟ್ಟಿಹಾಕಲ ಸಾಧ್ಯವಿಲ್ಲ: ಎಚ್. ವಿಶ್ವನಾಥ್

H Vishwanath (Photo-ANI)

“ಸರ್ಕಾರ ನನ್ನ ಕೈ ಹಾಗೂ ನನ್ನ ಬರವಣಿಗೆಯನ್ನು ಕಟ್ಟಿಹಾಕಲು ಸಾಧ್ಯವಿಲ್ಲ” ಇದು ಸಾಹಿತ್ಯ ಕ್ಷೇತ್ರದಿಂದ ಮೇಲ್ಮನೆ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ ಎಚ್.ವಿಶ್ವನಾಥ್‍ ಖಡಕ್ ಮಾತು.

ಮೈಸೂರಿನ ಜಿಲ್ಲಾ ಪತ್ರಕರ್ತರ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ ವತಿಯಿಂದ ಮಂಗಳವಾರ ಜಿಲ್ಲಾ ಪತ್ರಕರ್ತರ ಸಂಘದ ರಾಜಶೇಖರ ಕೋಟಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಹಿತ್ಯಿಕ-ಸಾಂಸ್ಕೃತಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತಿಯ ಲೇಖನವನ್ನು ಯಾರು ತಡೆಯಲು ಆಗಲ್ಲ. ಜನತಂತ್ರ‌ ವ್ಯವಸ್ಥೆ ಯಾರು ತಡೆಯಲು ಆಗಲ್ಲ. ನಾವು ಮಾಡಿದ್ದು ಒಂದು ಮಾದರಿ ಆಯಿತು. ನಾವು ಆಡಳಿತ ಪಕ್ಷದಿಂದ ವಿರೋಧ ಪಕ್ಷದ ಕಡೆಗೆ ಹೋದವರು. ಇದೇ ರೀತಿ ವಿವಿಧ ಕಡೆ ನಡೆಯಿತು. ಇದನ್ನ ಜನರಿಗೆ ಅರ್ಥವಾಗುವ ರೀತಿಯಲ್ಲಿ ಬರೆಯಬೇಕು‌. ನಾವು ಅನುಭವಿಸಿದ್ದನ್ನ ನಾವು ಬರೆಯಲೇಬೇಕಿರುವುದರಿಂದ ನಾನು ಪುಸ್ತಕ ಬರೆಯುತ್ತೇನೆ ಎಂದರು.

ಹೀಗಾಗಿ ಬಾಂಬೆ ಡೇಸ್ ಪುಸ್ತಕ ಬರೆಯೋದು ಹಾಗೂ ಬಿಡುಗಡೆ ಮಾಡೋದು ಎರಡು ಖಚಿತ. ಸರ್ಕಾರದಿಂದ ನನ್ನ ಕೈ ಮತ್ತು ಬರಹ ಕಟ್ಟಿಹಾಕಲು ಸಾಧ್ಯವಿಲ್ಲ. ಬಾಂಬೆ ಡೇಸ್‍ ಪುಸ್ತಕದಿಂದ ನಾನು ಯಾವುದನ್ನು ಸಾಬೀತು ಮಾಡಲು ಹೊರಟಿಲ್ಲ. ಇದರಲ್ಲಿ ಸರ್ಕಾರಕ್ಕೆ ಮುಜುಗರ ಥರವಂತದ್ದು ಏನೂ ಇರುವುದಿಲ್ಲ. ಬದಲಿಗೆ ಯಾವ ಕಾರಣಕ್ಕೆ ನಾವು ಬಂಡೆದ್ದು ಹೋದೆವು, ಹೇಗೆ ಕಾನೂನನ್ನು ದುರುಪಯೋಗ ಪಡಿಸಿಕೊಂಡರು ಎಂಬ ಮಾಹಿತಿ ಪುಸ್ತಕದಲ್ಲಿ ಇರಲಿದೆ. ನಾನು ಬ್ಲ್ಯಾಕ್ ಮೇಲ್ ಮಾಡುವುದಕ್ಕಾಗಿ ಪುಸ್ತಕ ಬರೆದಿಲ್ಲ, ಬರೆಯುವುದಿಲ್ಲ. ಅಲ್ಲದೇ ನನ್ನ ಬರವಣಿಗೆ ಮಾರಾಟಕ್ಕೆ ಇಲ್ಲ. ನಾನು ಮಿಸ್ಟರ್ ಕ್ಲೀನ್, ಹೀಗಾಗಿ ಚಾಮುಂಡಿಬೆಟ್ಟಕ್ಕೆ ಒಬ್ಬರನ್ನು ಧೈರ್ಯದಿಂದ ಕರೆದಿದ್ದು. ಶಾಸಕರಾದವರು, ಸಚಿವರಾದವರಿಗೆ ಕನಿಷ್ಠ ಜ್ಞಾನ ಇರಬೇಕು ಎಂದರು.

Latest News

Russia
ದೇಶ-ವಿದೇಶ

ಜನಸಂಖ್ಯೆ ಹೆಚ್ಚಳಕ್ಕೆ 10 ಮಕ್ಕಳಿಗೆ ಜನ್ಮ ನೀಡಿದ್ರೆ 13 ಲಕ್ಷ ಬಹುಮಾನ : ರಷ್ಯಾ ಅಧ್ಯಕ್ಷ ಪುಟಿನ್‌ ಘೋಷಣೆ

ರಷ್ಯಾದ ರಾಜಕೀಯ(Russia Politics) ಮತ್ತು ಭದ್ರತಾ ತಜ್ಞ ಡಾ ಜೆನ್ನಿ ಮ್ಯಾಥರ್ಸ್, ಟೈಮ್ಸ್ ರೇಡಿಯೊದಲ್ಲಿ ಈ ಕುರಿತು ಮಾತನಾಡಿ, “ಮದರ್ ಹೀರೋಯಿನ್” ಎಂದು ಕರೆಯಲ್ಪಡುವ ಬಹುಮಾನ ಯೋಜನೆ

Dakshina Kannada
ರಾಜ್ಯ

ವಿಜಯಟೈಮ್ಸ್ ಇಂಪ್ಯಾಕ್ಟ್ ; ಬಂಟ್ವಾಳ ಸೇತುವೆಯ ದುಸ್ಥಿತಿ ನೋಡಲು ದಿಢೀರನೇ ಬಂದ ಅಧಿಕಾರಿಗಳು!

ಕಳಪೆ ಕಾಮಗಾರಿ ದುರಂತದ ಬಗ್ಗೆ ವಿಜಯಟೈಮ್ಸ್ ತಂಡ ಮಾಡಿದ್ದ ವರದಿಗೆ ಅಧಿಕಾರಿಗಳು ಈಗ ದಿಢೀರ್ ಎಚ್ಚೆತ್ತುಕೊಂಡಿದ್ದಾರೆ.

IT Minister
ದೇಶ-ವಿದೇಶ

5G ಬಿಡುಗಡೆಗೆ ತಯಾರಿ ಮಾಡಿಕೊಳ್ಳಿ : ಟೆಲಿಕಾಂ ಕಂಪನಿಗಳಿಗೆ ಐಟಿ ಸಚಿವ ಅಶ್ವಿನಿ ವೈಷ್ಣವ್ ಸೂಚನೆ

ಇನ್ನು ಏರ್ಟೆಲ್(Airtel) ಮತ್ತು ಜಿಯೋ(Jio) ಈ ತಿಂಗಳ ಕೊನೆಯಲ್ಲಿ ತಮ್ಮ 5G ಸೇವೆಗಳ ಮೊದಲ ಹಂತವನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ.