ಬೆಂಗಳೂರು: ಕೊರೋನಾ ಲಾಕ್ ಡೌನ್ ಸ್ಥಗಿತಗೊಂಡ ಮೇಲೆ ನಮ್ಮ ಮೆಟ್ರೋ ಸೇವೆ ಸೆ. 7 ರಿಂದ ಪುನರಾರಂಭಗೊಂಡಿದೆ. ಆದ್ರೆ ಈಗ ಈ ಸೇವೆಗೆ ಭಾರೀ ಆತಂಕವೊಂದು ಎದುರಾಗಿದೆ. ಅದೇನಂದ್ರೆ ನಮ್ಮ ಮೆಟ್ರೋದ 28 ಮಂದಿ ಲೋಕೋ ಪೈಲೆಟ್ ಹಾಗೂ ಸ್ಟೇಷನ್ ಕಂಟ್ರೋಲರ್ ಗಳಿಗೆ ಕೊರೋನಾ ಸೋಂಕು ತಗುಲಿದೆ.
ಪೈಲೆಟ್ ಗಳಿಗೆ ಸೋಂಕು ತಗಲಿರುವುದರಿಂದ ಮೆಟ್ರೋ ಪ್ರಯಾಣಿಕರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಈ ಎಲ್ಲಾ ಪೈಲೆಟ್ ಗಳಿಗೆ ಸೋಂಕು ತಗಲಿದ್ದರೂ ಯಾವುದೇ ಲಕ್ಷಣಗಳಿಲ್ಲದೆ ಆರೋಗ್ಯವಾಗಿದ್ದಾರೆ. ಎಂಬ ಮಾಹಿತಿ ಲಭ್ಯವಾಗಿದೆ. ಎಲ್ಲರೂ ಗೃಹ ಬಂಧನದಲ್ಲಿದ್ದಾರೆ ವೈದ್ಯರ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ನಿತ್ಯವೂ ಲೋಕೋ ಪೈಲೆಟ್ ಗಳ ಪರೀಕ್ಷೆ ಮಾಡುತ್ತಿದ್ದು ಆರು ನಿಲ್ಧಾಣಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸೋಂಕು ತಗುಲಿದೆ.
ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ನಮ್ಮ ಮೆಟ್ರೋ ಸಂಚರಿಸುತ್ತಿದ್ದು 450 ಲೋಕೋ ಪೈಲೆಟ್ ಗಳು ಮತ್ತು ಸ್ಟೇಷನ್ ಕಂಟ್ರೋಲರ್ ಗಳು ಕೆಲಸ ಮಾಡುತ್ತಾರೆ. ಕೆಲಸಕ್ಕೆ ಬರುವ ಮುನ್ನ ಥರ್ಮಲ್ ಸ್ಕ್ರೀನಿಂಗ್ ಹಾಗೂ ಟೆಂಪರೇಚರ್ ಚೆಕ್ ಅಪ್ ಗೆ ಒಳಪಡುತ್ತಾರೆ. ಈ 23 ದಿನಗಳಲ್ಲಿ 6,92,269 ಮಂದಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಮಾರ್ಚ್ 22 ಕ್ಕೂ ಮೊದಲು ಪ್ರತಿನಿತ್ಯ 5.1 ಲಕ್ಷ ಜನ ಪ್ರಯಾಣಿಸುತ್ತಿದ್ದರು.