ಇತ್ತೀಚೆಗೆ ಎಷ್ಟೋ ಜನ ಬಿ ಪಿ, ಸಕ್ಕರೆ ಕಾಯಿಲೆ, ನರದೌರ್ಬಲ್ಯ, ಸಂಧಿವಾತ ಮುಂತಾದ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಔಷಧಿ ಇಲ್ಲದೆ ಬದುಕಲು ಕೆಲವರಿಗೆ ಸಾದ್ಯವಿಲ್ಲದಂತೆ ಆಗಿದೆ. ಯಾಕೆ ಗೊತ್ತೇ ಇದಕ್ಕೆ ಕಾರಣವೇ ಇಂದಿನ ಆಹಾರ ಪದ್ದತಿಯ ರೀತಿ ಸರಿಯಿಲ್ಲದಿರುವುದು.
ಮಾನವ ದೇಹಕ್ಕೆ ನಾರಿನಂಶದ ಪ್ರಮಾಣವು ಹೆಚ್ಚಾಗಿ ಸಿಗುವ ಆಹಾರವು ಉತ್ತಮ. ನವಣೆಯಲ್ಲಿ ನಾರಿನಂಶವು ಬಹಳಷ್ಟಿದ್ದು ರಕ್ತದೊತ್ತಡ ಕಡಿಮೆ ಮಾಡುವಲ್ಲಿ ಸಹಾಯಕವಾಗಿದೆ. ಮೈ ಕೈ ನೋವಿಗೆ ಹಾಗೂ ಗರ್ಭಿಣಿ ಸ್ತ್ರೀಯರಿಗೆ ನವಣೆಯಿಂದ ಅಡಿಗೆ ಮಾಡಿದರೆ ಒಳ್ಳೆಯದು.
ಮಧುಮೇಹಿಗಳಿಗೆ ನವಣೆ ಬಹಳ ಉತ್ತಮವಾದ ಆಹಾರ ಧಾನ್ಯ. ಪ್ರತಿದಿನ ನವಣೆ ದೋಸೆ ನವಣೆ, ಅನ್ನ , ಉಪ್ಪಿಟ್ಟು, ಹೀಗೆ ನವಣೆಯಿಂದಲೇ ಆಹಾರ ಪದಾರ್ಥಗಳನ್ನು ತಯಾರಿಸಿ ತಿನ್ನುತ್ತಿದ್ದರೆ ಮಧುಮೇಹ ಕಡಿಮೆಯಾಗುವುದರಲ್ಲಿ ಸಂಶಯವೇ ಇಲ್ಲ .ಡಾಕ್ಟರ್ ಔಷಧಿಯಿಂದ ಹತೋಟಿಗೆ ಬಾರದ ಸಕ್ಕರೆ ಕಾಯಿಲೆ ನವಣೆಯಿಂದ ಹತೋಟಿಗೆ ಬಂದೇ ಬರುತ್ತದೆ.
ನಾರಿನಂಶ ನವಣೆಯಲ್ಲಿ ಅಧಿಕವಾಗಿರುವುದರಿಂದ ದೇಹಕ್ಕೆ ಎಲ್ಲಾ ರೀತಿಯಲ್ಲೂ ಇದು ಸಹಕಾರಿಯಾಗಿದೆ. ದೇಹವನ್ನು ಸ್ಲಿಮ್ ಆಗಿ ಇಟ್ಟುಕೊಳ್ಳುವಲ್ಲೂ ಇದು ಸಹಕಾರಿಯಾಗುವುದು. ಇದರೊಂದಿಗೆ ಸಿರಿ ಧಾನ್ಯಗಳಾದ ರಾಗಿ ,ಜೋಳ, ಸಜ್ಜೆಯೂ ಉತ್ತಮ ಆರೋಗ್ಯ ನೀಡುವುದು. ಸಿರಿಧಾನ್ಯಗಳ ಹಿಟ್ಟನ್ನು ತಯಾರಿಸಿ ಆರೋಗ್ಯ ಖಾದ್ಯಗಳಲ್ಲಿ ಬಳಸಬಹುದು.