ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಎಲ್ಲರ ನೆಚ್ಚಿನ ಧಾರವಾಹಿಗಳ ಪೈಕಿ ಹಯವದನರವರ ನಿರ್ದೇಶನದ ನಾಗಿಣಿ ಸಹ ಒಂದಾಗಿದೆ. ನಾಗಿಣಿ ಪಾತ್ರಧಾರಿಯಾಗಿದ್ದ ದೀಪಿಕಾ ದಾಸ್ ಬಿಗ್ ಬಾಸ್ ಮನೆ ಸೇರಿಕೊಂಡಿದ್ದೇ ನಾಗಿಣಿ ಧಾರವಾಹಿಯೂ ಅಂತ್ಯ ಕಂಡಿದೆ..ಇದೀಗ ನಾಗಿಣಿ-2 ಪ್ರಾರಂಭವಾಗುವುದು ಪಕ್ಕಾ ಆಗಿದ್ದು ವಾಹಿನಿಯಲ್ಲಿ ಪ್ರೋಮೋ ಸಹ ಭಾರೀ ಜೋರಾಗಿಯೇ ಸದ್ದು ಮಾಡುತ್ತಿದೆ.

ಹೌದು..ಪುಟ್ಟಗೌರಿ ಮದುವೆ ಖ್ಯಾತಿಯ ಹಿಮಾ ಅಲಿಯಾಸ್ ನಮ್ರತಾ ಗೌಡ ನಾಗಿಣಿ-2 ನಲ್ಲಿ ಹೆಣ್ಣು ಸರ್ಪವಾಗಿ ಬಣ್ಣ ಹಚ್ಚಿದ್ದಾರೆ. ಪುಟ್ಟಗೌರಿ ಮದುವೆ ಅದ್ಯಾವಾಗ ಮಂಗಳ ಗೌರಿ ಮದುವೆಯಾಗಿ ಬದಲಾಯ್ತೋ ಹಿಮಾ ಪಾತ್ರವೂ ಕಳೆಗುಂದಿತ್ತು..ಇದಾದ ಬಳಿಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ನಮ್ರತಾ ಕಾಣಿಸಿಕೊಂಡಿದ್ದರೂ ಯಾವುದೇ ಸೀರಿಯಲ್ ಇಲ್ಲವೇ ಸಿನಿಮಾದಲ್ಲಿ ತೊಡಗಿಸಿಕೊಂಡಿರಲಿಲ್ಲ…ಸದ್ಯ ಬಹು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ನಾಗಿಣಿ-2 ಧಾರವಾಹಿ ಜನರ ಮನ ಗೆಲ್ಲುತ್ತಾ.. ? ದೀಪಿಕಾ ದಾಸ್ ಪಾತ್ರಕ್ಕಿಂತಲೂ ಹೆಚ್ಚಿನ ನಮ್ರತಾ ಪಾತ್ರವನ್ನು ಜನ ಒಪ್ಪಿಕೊಳ್ತಾರಾ ಎಂಬುದನ್ನು ಕಾದುನೋಡಬೇಕಿದೆ.