ಬೆಂಗಳೂರು, ನ. 19; ಕೊರೋನಾದಿಂದಾಗಿ ಶಾಲಾ, ಕಾಲೇಜುಗಳು ಸ್ಥಗಿತಗೊಂಡಿದ್ದವು. ನಾಳೆಯಿಂದ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ತರಗತಿಗಳು ಆರಂಭವಾಗುತ್ತಿದೆ. ಬರೋಬ್ಬರಿ 8 ತಿಂಗಳ ಬಳಿಕ ಕಾಲೇಜು ಆರಂಭವಾಗುತ್ತಿದ್ದು, ಕಾಲೇಜಿಗೆ ಬರಲು ಇಚ್ಚಿಸೋ ವಿದ್ಯಾರ್ಥಿಗಳಿಗೆ, ಅಧ್ಯಾಪಕರು ಹಾಗೂ ಸಿಬ್ಬಂದಿಗಳಿಗೆ ಯು.ಜಿ.ಸಿ, ಉನ್ನತ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಹಲವು ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ.
ಕಾಲೇಜಿಗೆ ಬರುವವರಿಗೆ ಹತ್ತು ಹಲವಾರು ನಿಯಮಗಳನ್ನು ಕಡ್ಡಾಯಗೊಳಿಸಿದೆ. ಅವುಗಳೆನೆಂದು ಇಲ್ಲಿ ಗಮನಿಸೋಣ.
ಮೊದಲನೆಯದಾಗಿ, ಕಾಲೇಜಿಗೆ ಬರುವ 72 ಗಂಟೆ ಮೊದಲು ಕೊರೋನಾ ಟೆಸ್ಟ್ ಮಾಡಿಸಬೇಕು. RTPCR ಟೆಸ್ಟ್ ರಿಸಲ್ಟ್ ಪಡೆದು ಕಾಲೇಜಿಗೆ ಹಾಜರಾಗಬೇಕು. ಕಾಲೇಜಿಗೆ ಹೋಗಲು ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿರಬೇಕು.
ಕಾಲೇಜಿನಲ್ಲಿ ಕ್ಯಾಂಟೀನ್ ಇಲ್ಲದಿರೋ ಕಾರಣ, ನೀವೇ ಊಟ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ಕುಡಿಯುವ ನೀರಿನ ಜೊತೆಯಲ್ಲಿ, ಸಣ್ಣ ಸ್ಯಾನಿಟೈಸರ್ ಇಡೋದು ಉತ್ತಮ. ಸ್ನೇಹಿತರಲ್ಲಿ ಸೋಂಕಿನ ಲಕ್ಷಣಗಳಿದ್ದಲ್ಲಿ, ಕೂಡಲೇ ಕಾಲೇಜಿನ ಪ್ರಾಂಶುಪಾಲರಿಗೆ ಮಾಹಿತಿ ನೀಡುವುದು. ಸೇರಿದಂತೆ ಯು.ಜಿ.ಸಿಯ ಹತ್ತು ಹಲವು ಗೈಡ್ ಲೈನ್ಸ್‌ಗಳನ್ನ ಫಾಲೋ ಮಾಡಬೇಕಿದೆ.. ಇದರ ನಡುವೆ ಹಂತ ಹಂತವಾಗಿ ತರಗತಿಗಳನ್ನ ಆರಂಭಿಸುವುದಾಗಿ ಬೆಂಗಳೂರು ವಿವಿ ಕುಲಪತಿ ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ.
ಇನ್ನು, ಕಾಲೇಜು ಆರಂಭದ ಮೊದಲು, ಕೊಠಡಿಗಳನ್ನು ಸ್ವಚ್ಚಗೊಳಿಸಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಕಾಲೇಜು ಎಂಟ್ರಿ ಆಗುತ್ತಿದ್ದಂತೆ ಕಾಲೇಜಿನ ಹೊರ ಭಾಗದಲ್ಲೇ ಸ್ಯಾನಿಟೈಸ್ ಮಾಡಿ, ಥರ್ಮಲ್ ಟೆಸ್ಟ್ ಮಾಡಲಾಗುವುದು.. ಹಳೆಯ ಪಾಸ್ ಅಥವಾ ಅಡ್ಮಿಷನ್ ಕಾರ್ಡ್ ಇದ್ರೆ, ಮನೆಯಿಂದ ಕಾಲೇಜಿಗೆ ಉಚಿತವಾಗಿ ಬರಲು ವಿದ್ಯಾರ್ಥಿಗಳಿಗೆ ಬಿಎಂಟಿಸಿ ಅನುವು ಮಾಡಿಕೊಟ್ಟಿದೆ.. ಇನ್ನು, ಕಾಲೇಜಿಗೆ ಬರೋ ವಿದ್ಯಾರ್ಥಿಗಳಿಗೆ ತರಗತಿಗಳನ್ನ ನಡೆಸುತ್ತೇವೆ.. ಆದ್ರೆ ಕಡ್ಡಾಯವಾಗಿ ಬರಲೇಬೇಕು ಅಂತ ಯಾವುದೇ ವಿದ್ಯಾರ್ಥಿಗಳಿಗೆ ಒತ್ತಡ ಹೇರಲಾಗ್ತಿಲ್ಲ.. ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕವೂ ತರಗತಿಯನ್ನ ನಡೆಲಾವುದು ಅಂತ, ಉನ್ನತ ಶಿಕ್ಷಣ ಇಲಾಖೆ ಸಚಿವ ಅಶ್ವಥ್ ನಾರಾಯಣ್ ಕೂಡ ಸ್ಪಷ್ಟಪಡಿಸಿದ್ದಾರೆ.. ನಾಳೆಯಿಂದ ಪದವಿ, ಸ್ನಾತಕೋತ್ತರ ಪದವಿ ಕಾಲೇಜು ಆರಂಭವಾಗಲಿದೆ.. ಇನ್ನು ಡಿಸೆಂಬರ್ 1ರಿಂದ ವೈದ್ಯಕೀಯ ಕಾಲೇಜುಗಳು ಆರಂಭವಾಗಲಿದ್ದು, ಇವುಗಳ ಸಾಧಕ, ಬಾದಕಗಳನ್ನ ನೋಡಿಕೊಂಡು.. ಪದವಿ ಪೂರ್ವ ಹಾಗೂ ಶಾಲೆಗಳನ್ನ ಆರಂಭಿಸೋ ನಿರ್ಧಾರವನ್ನ ಸರ್ಕಾರ ತೆಗೆದುಕೊಳ್ಳಲಿದೆ..