ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್, ಫ್ಯಾನ್ಸ್ ವಾರ್ ಬಲು ಜೋರಾಗಿಯೇ ನಡೆಯುತ್ತಿದೆ..ಪೈಲ್ವಾನ್ ಚಿತ್ರ ಪೈರಸಿ ವಿಚಾರ ಹಾಗೂ ನೆಗೆಟಿವ್ ಪ್ರಚಾರ ಸಂಬಂಧ ಶುರುವಾಗಿರುವ ಸದ್ಯದ ಟ್ವಿಟ್ಟರ್ ವಾರ್ ನಿಲ್ಲುವಂತೆ ಕಾಣಿಸುತ್ತಿಲ್ಲ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿನ್ನೆಯಷ್ಟೇ ತಮ್ಮ ಚಿತ್ರದ ಪೈರಸಿ ವಿಚಾರವಾಗಿ ಮಾಡಿರುವ ಟ್ವೀಟ್ ಭಾರೀ ಟೀಕೆಗೆ ಗುರಿಯಾಗಿದೆ.
ಹೌದು.. ”ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನುಗೊತಿಲ್ಲ. ನನ್ನ ಮೌನ, ನನ್ನ ತಾಳ್ಮೆ, ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ, ಇನ್ನು ಕೆಲವು ದಿನಗಳು ಮಾತ್ರ.” ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಸುದೀಪ್ ಟ್ವೀಟ್‍ಗೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗಿದೆ. ಅದ್ರಲ್ಲೂ ಸುದೀಪ್ ರನ್ನು ನೆಚ್ಚಿನ ನಟನೆಂದುಕೊಂಡಿದ್ದು ಅನೇಕ ಮಹಿಳಾ ಅಭಿಮಾನಿಗಳೂ ಸಹ ಕಿಚ್ಚನ ಟ್ವೀಟ್ ನಿಂದ ಬೇಸರಗೊಂಡಿದ್ದು, ಇದಕ್ಕೆ ಪ್ರತ್ಯುತ್ತರ ನೀಡಿದ್ದಾರೆ..`ಬಳೆ ತೊಟ್ಟಿಲ್ಲ’ ಎಂಬ ಮಾತು ಮಹಿಳೆಯರು ಅಶಕ್ತರು ಎಂಬುದನ್ನು ಬಿಂಬಿಸುವಂತಿದೆ. ಹೆಸರಾಂತ, ಸ್ಟಾರ್ ನಟ ಇಂತಹ ಪದ ಬಳಕೆ ಮಾಡುವ ಮೂಲಕ ಲಿಂಗ ತಾರತಮ್ಯವೆಸಗುತ್ತಿದ್ದಾರೆಂದು ಅನೇಕರು ಆರೋಫಿಸಿದ್ದಾರೆ..ಕಿಚ್ಚನ ಈ ಟ್ವೀಟ್ ಅದಿನ್ನೆಷ್ಟು ಸಂಚಲನ ಸೃಷ್ಟಿಸುತ್ತೋ ದೇವರಿಗೇ ಗೊತ್ತು..


