Visit Channel

ನಾವು ಭೂಮಿ ಕಬಳಿಸುವವರಲ್ಲ: ವರಸೆ ಬದಲಿಸಿದ ಚೀನಾ

2_08_33_53_India-China-agree-_1_H@@IGHT_491_W@@IDTH_655

ಗಲ್ವಾನ್ ಕಣಿವೆಯಲ್ಲಿ ಸಂಘರ್ಷ ಮಾಡಿ ಭಾರತದ ಯೋಧರ ಸಾವಿಗೆ ಕಾರಣವಾದ ಚೀನಾ ಈಗ ವರಸೆ ಬದಲಾಯಿಸಿದೆ. ನಾವು ಭೂಮಿ ಕಬಳಿಸುವವರಲ್ಲ ಎಂದು ಹೇಳಿಕೆ ನೀಡಿದೆ.
ಶುಕ್ರವಾರ ಲೇಹ್‍ಗೆ ಪ್ರಧಾನಿ ಮೋದಿ ಭೇಟಿ ನೀಡಿದ ಸಂದರ್ಭದಲ್ಲಿ ಗಡಿ ವಿಸ್ತರಣೆಯ ಯುಗ ಮುಗಿದಿದೆ. ಭಾರತ ಶತ್ರುಗಳಿಗೆ ನಿಮ್ಮೆಲ್ಲ ಶಕ್ತಿ, ಸಾಮಥ್ರ್ಯ, ಶೌರ್ಯದ ಪರಿಚಯವಾಗಿದೆ. ಗಂಡಿ ವಿಸ್ತರಣೆಯ ಮಾತೇ ಇಲ್ಲ. ಇನ್ನೆನಿದ್ದರೂ ಅಭಿವೃದ್ಧಿಯ ಪರ್ವದ ಕಾಲ. ಭೂಕಬಳಿಸುವವರು ಆ ಕೃತ್ಯವನ್ನು ಕೈ ಬಿಟ್ಟು ಸುಮ್ಮನಿದ್ದರೆ ಒಳ್ಳೆಯದು. ಇಲ್ಲವಾದರೆ ಅವರ ನಾಶವಾಗುತ್ತದೆ ಎಂದು ಚೀನಾದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದರು.
ಮೋದಿ ವಾಗ್ದಾಳಿ ನಂತರ ಪ್ರತಿಕ್ರಿಯೆ ನೀಡಿರುವ ಚೀನಾ, ನಾಔಉ ಬೇರಯವರ ಭೂಮಿ ಕಬಳಿಸುವವರಲ್ಲ. ನಮಗೆ ರಾಜ್ಯ ವಿಸ್ತರಣೆಯ ಅವಶ್ಯಕತೆಯೂ ಇಲ್ಲ. ಅದಕ್ಕಾಗಿ ಹುನ್ನಾರ ನಡೆಸುವವರು ನಾವಲ್ಲ ಎಂದು ಚೀನಾ ಹೇಳಿದೆ.
ಇನ್ನು ಈ ಬಗ್ಗೆ ಟ್ವಿಟ್ ಮಾಡಿರುವ ಭಾರತದಲ್ಲಿನ ಚೀನಾದ ರಾಯಭಾರ ಕಚೇರಿಯ ವಕ್ತಾರ ಜಿ ರಾಂಗ್ ಭಾರತ ಪ್ರಧಾನ ಮಂತ್ರಿ ಮೋದಿ ತಮ್ಮ ವಿರುದ್ಧ ಮಾಡಿರುವ ಭೂಕಬಳಿಕೆಯ ಆರೋಪವೆಲ್ಲ ಸುಳ್ಳು. ನಾವು ಅಂಥಹ ಮನೋಭಾವದವರಲ್ಲ. ಚೀನಾ 14 ರಾಷ್ಟೆಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಅವುಗಳಲ್ಲಿ 12 ರಾಷ್ಟ್ರಗಳ ಜತೆ ಮಾತುಕತೆಯ ಮೂಲಕ ಶಾಂತಿಯುತವಾಗಿ ಗಡಿಯನ್ನು ನಿಖರವಾಗಿ ಗುರುತಿಸಿಕೊಂಡಿದೆ. ಸ್ನೇಹ ಮತ್ತು ಸೌಹಾರ್ದಯುತವಾಗಿ ರಾಷ್ಟ್ರಗಳೊಂದಿಗೆ ಇದೆ. ಇಂತಹ ನಮ್ಮನ್ನು ಗಡಿವಿಸ್ತರಣೆಯ ಆಸೆಯಿರುವ ರಾಷ್ಟ್ರ ಎಂದು ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.