ಹಾಲು, ಸೊಪ್ಪು ತರಕಾರಿ, ಧವಸಧಾನ್ಯಗಳು, ಆರೋಗ್ಯಕ್ಕೆ ಎಷ್ಟು ಉತ್ತಮವೋ ಅಷ್ಟೇ ಮಹತ್ವದ್ದು ಹಣ್ಣುಗಳು..ಒಂದೊಂದು ಹಣ್ಣು ದೇಹದ ಪ್ರತ್ಯೇಕ ಅಂಗಗಳ ಆರೋಗ್ಯವನ್ನು ಕಾಪಾಡುತ್ತವೆ. ಬಾಯಿಗೆ ರುಚಿಯಲ್ಲದೇ ಹೋದರೂ ಆರೋಗ್ಯದ ದೃಷ್ಟಿಯಿಂದ ಉಪಕಾರಿಯಾಗಿರುವುದು ಬೆಣ್ಣೆ ಹಣ್ಣಿನ ವಿಶೇಷತೆಯಾಗಿದೆ.
ಇತ್ತೀಚೆಗೆ ಪೆನ್ನ್ ಸ್ಟೇಟ್ ನಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಅವಕಾಡೊದಲ್ಲಿ ಅಧಿಕ ಮಟ್ಟದ ಎಂಯುಎಫ್ ಎ(ಏಕ ಪರ್ಯಾಪ್ತ ಕೊಬ್ಬಿನಾಮ್ಲ) ಇದೆ ಮತ್ತು ಆಂಟಿಆಕ್ಸಿಡೆಂಟ್ ಮತ್ತು ಪಾಲಿಫೆನಾಲ್ಗಳು ಇದರಲ್ಲಿ ಸಮೃದ್ಧವಾಗಿದೆ. ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್ಗಳ ಬಗ್ಗೆ ತರಕಾರಿಗಳು, ಬೀಜಗಳು, ಹಣ್ಣುಗಳ ಬಗ್ಗೆ ನಡೆದಷ್ಟು ಸಂಶೋಧನೆಗಳು ನಡೆದಿಲ್ಲ.
ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇದ್ದರೆ ಆಗ ಹೃದಯ ಸಂಬಂಧಿ ಕಾಯಿಲೆಗಳು ಬರುವುದು. ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆ ಮಾಡಲು ಅವಕಾಡೊದಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ತುಂಬಾ ಪರಿಣಾಮಕಾರಿ ಎಂದು ಸಂಶೋಧನೆಗಳು ಹೇಳಿವೆ. ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಬಗ್ಗೆ ಜನರಿಗೆ ಹೆಚ್ಚಾಗಿ ತಿಳಿದಿಲ್ಲ. ಕೆಟ್ಟ ಕೊಲೆಸ್ಟ್ರಾಲ್ ಎಂದರೆ ಆಕ್ಸಿಡೀಕೃತ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್(ಎಲ್ ಡಿಎಲ್) ಮತ್ತು ಸಣ್ಣ ಸಾಂದ್ರತೆಯ ಎಲ್ ಡಿಎಲ್ ಕಣಗಳು. ಅದೇ ಒಳ್ಳೆಯ ಕೊಲೆಸ್ಟ್ರಾಲ್ ಎಂದರೆ ಅಧಿಕ ಸಾಂದ್ರತೆಯ ಲಿಪೊಪ್ರೋಟೀನ್(ಎಚ್ ಡಿಎಲ್).
ರಕ್ತನಾಳಗಳಲ್ಲಿ ಶೇಖರಣೆ ಆಗಿರುವ ಕೊಬ್ಬಿನ ಪದರಗಳಿಂದಾಗಿ ಅಧಿಕ ಸಂಖ್ಯೆಯ ಜನರು ಹೃದಯದ ಕಾಯಿಲೆಗಳಿಂದಾಗಿ ಸಾವನ್ನಪ್ಪುವರು. ಈ ಪದರ ನಿರ್ಮಾಣವನ್ನು ಕಡಿಮೆ ಮಾಡಿದರೆ ಆಗ ಹೃದಯದ ಕಾಯಿಲೆಗಳನ್ನು ಅರ್ಧದಷ್ಟು ತಡೆಗಟ್ಟಿದಂತೆ. ದಿನಕ್ಕೆ ಒಂದು ಅವಕಾಡೊ ತಿಂದರೆ ಅದರ ಲಾಭಗಳು ಸಿಗುವುದು. ಆದರೆ ಬೇಗ ಇದರ ಲಾಭ ಪಡೆಯಲು ಹೆಚ್ಚಿನ ಮಟ್ಟದಲ್ಲಿ ಸೇವನೆ ಮಾಡಿದರೆ ಅವಕಾಡೊದಲ್ಲಿ ಇರುವಂತಹ 230 ಕ್ಯಾಲರಿಯು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು ಮತ್ತು ಅದರಿಂದ ಸಿಗುವ ಲಾಭಗಳು ಸಿಗದೆ ಇರಬಹುದು. ಆದ್ದರಿಂದ ನಿಮ್ಮ ಆಹಾರ ಕ್ರಮದಲ್ಲಿ ಬೆಳಗ್ಗೆ ಅಂಥವಾ ರಾತ್ರಿಯ ವೇಳೆ ಅವಕಾಡೊವನ್ನು ಸೇರಿಸಿಕೊಳ್ಳಿ ಮತ್ತು ಇದನ್ನು ಮುಂದುವರಿಸಿಕೊಂಡು ಹೋಗಿ. ಇದು ಆರೋಗ್ಯಕಾರಿ ಕೊಬ್ಬನ್ನು ನೀಡುವುದು ಮಾತ್ರವಲ್ಲದೆ, ಹೃದಯದ ಕಾಯಿಲೆ ಸಮಸ್ಯೆ ನಿವಾರಣೆ ಮಾಡುವುದು. ಆದರೆ ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ನೀವು ಇದನ್ನು ತುಂಬಾ ಮಿತ ಪ್ರಮಾಣದಲ್ಲಿ ಸೇವನೆ ಮಾಡಿ.