ನೀರು ಪೋಲು ಮಾಡಿದರೆ 1,000 ರೂ ದಂಡ ಗ್ಯಾರೆಂಟಿ..!

ಬೆಂಗಳೂರು,ಅ.22:  ಬೆಂಗಳೂರಿನಲ್ಲಿ ನೀರು ಉಳಿಸಲು ಜಲಮಂಡಳಿ ಹೊಸ ಪ್ಲಾನ್‌ ಮಾಡಿದೆ. ಕಾವೇರಿ ಹಾಗೂ ಬೋರ್‌ವೆಲ್‌ ನೀರನ್ನು ಪೋಲು ಮಾಡುವ ನಿರ್ಲಕ್ಷ್ಯಕ್ಕೆ ಪಾಠ ಕಲಿಸಲು ಬೆಂಗಳೂರು ಜಲಮಂಡಳಿ ದಂಡ ವಿಧಿಸುವ ನಿಯಮ ರೂಪಿಸಲಿದೆ. ನೀರು ಪೋಲಾಗದಂತೆ ನೋಡಿಕೊಳ್ಳಬೇಕೆಂಬ ರಾಜ್ಯ ಸರಕಾರದ ಸೂಚನೆಯಂತೆ ಮನೆಯ ಓವರ್ ಹೆಡ್‌ ಟ್ಯಾಂಕ್‌ನಿಂದ ನೀರು ತುಂಬಿ ಹರಿದರೆ 1,000 ರೂ. ದಂಡ ಖಚಿತವಂತೆ..!
ಜಲಮಂಡಳಿಯಿಂದ ನೀರು ಪೂರೈಸಿದಾಗ ಕೆಳಗಿನ ಸಂಪ್‌ನಲ್ಲಿ ತುಂಬಿಕೊಂಡು ನಂತರ ಅದನ್ನು ಮೇಲಿನ ಟ್ಯಾಂಕ್‌ಗೆ ಪಂಪ್‌ ಮಾಡಿಕೊಳ್ಳಲಾಗುತ್ತದೆ. ಇಂತಹ ಸಂದರ್ಭದಲ್ಲಿ ನೀರು ತುಂಬಿ ಟ್ಯಾಂಕ್‌ನಿಂದ ಉಕ್ಕಿ ಹರಿಯುವುದು ಕಂಡುಬಂದಿದೆ. ಪಂಪ್‌ ಆನ್‌ ಮಾಡಿ ಮತ್ತೆ ಆಫ್‌ ಮಾಡುವುದನ್ನು ಮರೆಯುವುದರಿಂದ ಸಾವಿರಾರು ಲೀಟರ್‌ ಕಾವೇರಿ ನೀರು ವ್ಯರ್ಥವಾಗುತ್ತಿದೆ. ಬೋರ್‌ವೆಲ್‌ನಿಂದ ಪಂಪ್‌ ಮಾಡಿಕೊಳ್ಳುವಾಗಲೂ ಈ ರೀತಿಯ ತಪ್ಪುಗಳು ಕಂಡುಬರುತ್ತಿವೆ.
ಟ್ಯಾಂಕ್‌ನಲ್ಲಿ ನೀರು ಮೇಲ್ಪಟ್ಟಕ್ಕೆ ಬಂದಾಗ ಸ್ವಯಂಚಾಲಿತವಾಗಿ ಪಂಪ್‌ ಆಫ್‌ ಆಗುವ ‘ಆಟೊಮೆಟಿಕ್‌ ವಾಟರ್‌ ಕಂಟ್ರೋಲ್‌ ಸಿಸ್ಟಮ್‌’ ತಂತ್ರಜ್ಞಾನ ಲಭ್ಯವಿದೆ. ಸಿಂಟೆಕ್ಸ್‌ನಲ್ಲಿ ಸಾಮಾನ್ಯವಾಗಿ ಬಾಲ್‌ ಕಾಕ್‌ ಬಳಸಿ ನೀರು ವ್ಯರ್ಥವಾಗುವುದನ್ನು ತಡೆಯಬಹುದು. ಆದರೂ ಯಾರೂ ಇದನ್ನು ಅನುಸರಿಸುತ್ತಿಲ್ಲ.

ಈ ರೀತಿ ನೀರು ಪೋಲು ಮಾಡಿದರೆ ದಂಡ ಹಾಕಲು ನಿಯಮ ರೂಪಿಸಲಾಗುತ್ತಿದೆ. ಈ ನಿಯಮವನ್ನು ಬಳಸಿಕೊಂಡು ಅಧಿಕಾರಿಗಳಿಗೆ ಜನರಿಗೆ ದಂಡ ವಿಧಿಸಲು ಅನುಕೂಲವಾಗಲಿದೆ. ಆದರೆ ಈ ತಪ್ಪುಗಳನ್ನು ಪತ್ತೆ ಮಾಡುವುದೇ ಸವಾಲಾಗಿದೆ. ಸೇವಾಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಮೀಟರ್‌ ರೀಡರ್‌ ಹಾಗೂ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest News

ಆರೋಗ್ಯ

ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ

ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.