ಮಹಾಮಾರಿ ಕೊರೋನಾ ಸೋಂಕು ವಿಶ್ವದೆಲ್ಲೆಡೆ ಹರಡಿದ್ದು; ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ . ಆದ್ರೆ ಇದರ ನಡುವೆ ಇದೀಗ ಹೈದರಾಬಾದ್ ನ ತೆಲಂಗಾಣದಲ್ಲಿ ಕರೊನಾ ಸೋಂಕು ತನ್ನ ಪ್ರಭಾವವನ್ನು ಹೆಚ್ಚಿಸುತ್ತಲೇ ಇದೆ .
ಅದರಲ್ಲೂ ಪತ್ರಕರ್ತರು ಕೊರೋನಾದ ಬಗ್ಗೆ ಪ್ರತಿದಿನ ಜನರಿಗೆ ಸುದ್ದಿಯನ್ನು ನೀಡುತ್ತಲೇ ಇದ್ದು ಪತ್ರಕರ್ತರ ಜೀವನವು ಸಂಕಷ್ಟದಲ್ಲಿದೆ .ಇದೀಗ ಹೈದರಬಾದ್ ನ 140 ಮಂದಿ ಪತ್ರಕರ್ತರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು ಆ ಪೈಕಿ 23 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ತೆಲಂಗಾಣ ಆರೋಗ್ಯ ಸಚಿವಾಲಯ ತಿಳಿಸಿದ್ದಾರೆ.
ಇದರ ಜೊತೆಗೆ ಭಾನುವಾರದವರೆಗೆ ತೆಲಂಗಾಣದಲ್ಲಿ 237 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಮೂವರು ಮೃತಪಟ್ಟಿದ್ದಾರೆ. ತೆಲಂಗಾಣ ರಾಜ್ಯದಲ್ಲಿ 4,974 ಪ್ರಕರಣಗಳಿವೆ, ಅದರಲ್ಲಿ 2,377 ಮಂದಿ ಗುಣಮುಖರಾಗಿದ್ದಾರೆ. 2,412 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 185 ಮಂದಿ ಇಲ್ಲಿಯವರೆಗೆ ಮೃತಪಟ್ಟಿದೆ.ಇನ್ನು ಈಗಾಗಲೇ
ಹೈದರಾಬಾದಿನಲ್ಲಿ 50 ಸಾವಿರ ಮಂದಿಗೆ ಕರೊನಾ ಸೋಂಕು ಪರೀಕ್ಷೆ ಮಾಡಿಸಲಾಗುತ್ತದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮಾಹಿತಿ ನೀಡಿದ್ದಾರೆ.
…………………….