ಆನ್‌ಲೈನ್ ಆಟಕ್ಕೆ ಬಿದ್ದಿರುವ ಯುವ ಸಮೂಹಕ್ಕೆ ಪುಬ್‌ಜಿ ಹೊಸ ಮಾದಕತೆಯನ್ನು ನೀಡುತ್ತಿತ್ತು, ಈ ಗೀಳಿಗೆ ಅಂಟಿಕೊಂಡಿದ್ದ ದಿಲ್ಲಿ ಮೂಲದ ಬಾಲಕನೊಬ್ಬ ತನ್ನ ತಾತನ ಬ್ಯಾಂಕ್ ಖಾತೆಯಿಂದ ಸುಮಾರು ಎರಡು ಲಕ್ಷಕ್ಕೂ ಅಧಿಕ ಹಣವನ್ನು ವ್ಯಯಿಸಿರುವ ಕುರಿತು ವರದಿಯಾಗಿದೆ.
ಈಗಾಗಲೇ ಕೇಂದ್ರ ಸರಕಾರ ಪಬ್‌ಜಿ ಸೇರಿದಂತೆ ಸಾಕಷ್ಟು ಆನ್‌ಲೈನ್ ಆಟಗಳನ್ನು ನಿಷೇಧಿಸುತ್ತಲೇ ಬಂದಿದೆ. ಆದರೂ ಆಫ್‌ಲೈನ್ ಮೂಲಕ ಈ ಆಟಗಳನ್ನು ಆಡಬಹುದು. ಈ ಆಟದ ಚಟಕ್ಕೆ ಬಿದ್ದಿದ್ದ 15ರ ಬಾಲಕ ಆಟದಲ್ಲಿ ಹೆಚ್ಚು ಶ್ರೇಯಾಂಕವನ್ನು ಹಾಗೂ ಹೆಚ್ಚು ಗನ್‌ಗಳನ್ನು ಖರೀದಿಸುವ ಸಲುವಾಗಿ ಅಜ್ಜನ ಪಿಂಚಣಿ ಖಾತೆಯಿಂದ ಸುಮಾರು 2.30 ಲಕ್ಷ ಹಣವನ್ನು ಖರ್ಚು ಮಾಡಿದ್ದಾನೆ.
ಈ ಅಜ್ಜ ಮಾಜಿ ಬಿಎಸ್‌ಎನ್‌ಎಲ್ ಉದ್ಯೋಗಿಯಾಗಿದ್ದು, ತನ್ನ ಖಾತೆಯ ಹಣ ಮಾಯವಾಗಿರುವುದಿಂದ ಭಯಗೊಂಡಿದ್ದಾರೆ. ಈ ವೇಳೆ ಬಾಲಕ ಅಜ್ಜನಿಗೆ ಖಾತೆ ಹ್ಯಾಕ್ ಆಗಿರುವ ಕಥೆ ಹೇಳಿದ್ದಾನೆ. ಇದರಿಂದ ಭಯಗೊಂಡ ಅಜ್ಜ ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು ಹಣ ಪೇಟಿಂ ಮೂಲಕ ವ್ಯಯ ಆಗಿರುವುದನ್ನು ಕಂಡು ಹಿಡಿದಿದ್ದಾರೆ. ಹೀಗಾಗಿ ಕಳ್ಳ ಮನೆಯಲ್ಲೇ ಇರಬಹುದು ಎಂದು ಗ್ರಹಿಸಿದ್ದಾರೆ. ಅಲ್ಲದೇ ಬಾಲಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಬಾಲಕ ಪಬ್‌ಜಿ ಆಟದಲ್ಲಿ ಮಷಿನ್ ಗನ್‌ಗಳು, ಆಟದ ಹಂತಗಳನ್ನ ತಲುಪಲು ಹಣ ವ್ಯಯಿಸಿರುವುದಾಗಿ ತಿಳಿಸಿದ್ದಾನೆ. ಅಲ್ಲದೇ ಇದಕ್ಕಾಗಿ ಬರುತ್ತಿದ್ದ ಒಟಿಪಿ ಹಾಗೂ ಬ್ಯಾಂಕಿನ ಮೇಸೆಜ್‌ಗಳನ್ನ ತಾತನ ಫೋನ್‌ನಿಂದ ಡಿಲೀಟ್ ಮಾಡಿರುವುದಾಗಿಯು ಹೇಳಿದ್ದಾನೆ.