ಇಂದು(ಸೋಮವಾರ)ಬೆಳಗ್ಗೆ ಕರಾಚಿಯ ಪಾಕಿಸ್ತಾನ ಸ್ಟಾಕ್ ಎಕ್ಸ್ಚೇಂಜ್ ಕಟ್ಟಡದ ಮೇಲೆ ನಾಲ್ಕು ಭಾರಿ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 4 ಉಗ್ರರು ಸೇರಿ 9 ಮಂದಿ ಮೃತಪಟ್ಟಿದ್ದಾರೆ.
ಸ್ಟಾಕ್ ಎಕ್ಸ್ಚೇಂಜ್ ಕಟ್ಟಡದ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಪೊಲೀಸರು ಸುತ್ತುವರೆದು ಪ್ರತಿ ದಾಳಿ ಮಾಡಿದ್ದಾರೆ. ಈ ವೇಳೆ ನಾಲ್ವರು ಉಗ್ರರು ಸಾವನ್ನಪ್ಪಿದ್ದು. ಇನ್ನು ಕಾರ್ಯಾಚರಣೆ ಮುಂದುವರೆದಿದೆ.
ಈ ದಾಳಿಯಲ್ಲಿ ಉಗ್ರರು ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಕಟ್ಟಡದ ಒಳಗೆ ನುಗ್ಗಿದ್ದು ದಾಳಿ ನಡೆಸಿದ್ದಾರೆ.ಜತೆಗೆ ಗ್ರೆನೇಡ್ ದಾಳಿ ಕೂಡ ನಡೆಸಿದ್ದಾರೆ. ದಾಳಿ ನಡೆದ ಸ್ಥಳದಲ್ಲಿ ಕೈ ಗ್ರೆನೇಟ್‍ಗಳು, ಎಕೆ-47 ರೈಫಲ್‍ಗಳು, ನಿಯತಕಾಲಿಕೆಗಳು ಮತ್ತು ಇತರ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಇವೆಲ್ಲವನ್ನು ನೋಡಿದರೆ ಉಗ್ರರು ಸುದೀರ್ಘ ಮುತ್ತಿಗೆ ಪ್ಲಾನ್ ಮಾಡಿಕೊಂಡು ಬಂದಿರುವಂತಿದೆ ಎನ್ನಲಾಗುತ್ತಿದೆ. ಈ ದಾಳಿಯಲ್ಲಿ ಹೆಚ್ಚಿನ ಜನರು ಗಾಯಗೊಂಡಿದ್ದು ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.
ಈ ದಾಳಿಯ ಹೊಣೆಯನ್ನು ಬಲೂಚ್ ಲಿಬರೇಶನ್ ಆರ್ಮಿ ಹೊತ್ತುಕೊಂಡಿದೆ ಎಂದು ಪಾಕಿಸ್ತಾನದ ಮಾಧ್ಯಮ ಮೂಲಗಳು ತಿಳಿಸಿವೆ. ಸದ್ಯ ಸ್ಟಾಕ್ ಎಕ್ಸ್ಚೇಂಜ್ ಕಟ್ಟಡದ ಸುತ್ತಮುತ್ತ ಪ್ರದೇಶಗಳಲ್ಲಿ ಪೊಲೀಸರು ಸುತ್ತುವರೆದು ಕಟ್ಟೆಚ್ಚರವಹಿಸಿದ್ದಾರೆ.