ನ್ಯೂಯಾರ್ಕ್: ಇಡೀ ಮನು ಕುಲವೇ ತಲೆ ತಗ್ಗಿಸುವಂತಹ ಹೇಯ ಕೃತ್ಯ ಅಮೆರಿಕದ ಫಿಲಿಡೆಲ್ಪಿಯಾದಲ್ಲಿ ನಡೆದಿದೆ. ಕಾಮುಕ ತಂದೆಯೊಬ್ಬ ತನ್ನ 10 ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರವೆಸಗಿ ಮಗುವಿನ ಸಾವಿಗೆ ಕಾರಣನಾಗಿದ್ದಾನೆ.
ಡೈಲಿ ಮೇಲ್ ವರದಿಯಂತೆ ಆರೋಪಿ ತಂದೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಮಗುವಿನ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಮತ್ತು ಮಗುವಿಗೆ ಅಪಾಯ ಉಂಟುಮಾಡಿದ್ದು ಸೇರಿ ಇನ್ನಿತರ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಆರೋಪಿ ತಂದೆಯನ್ನು ಆಸ್ಟಿನ್ ಸ್ಟೀವನ್(29) ಎಂದು ಗುರುತಿಸಲಾಗಿದ್ದು, ಫೆಲಿಡೆಲ್ಪಿಯಾದಲ್ಲಿ ತನ್ನ ನಿವಾಸದಲ್ಲಿ ಕಳೆದ ಶನಿವಾರ ಮಗುವಿನ ಮೇಲೆ ಅತ್ಯಾಚಾರ ಮಾಡಿ ರಕ್ತಸಿಕ್ತ ಸ್ಥಿತಿಯಲ್ಲಿ ಬಿಟ್ಟಿದ್ದ. ಮಗು ಉಸಿರಾಡುವುದನ್ನು ನಿಲ್ಲಿಸಿದ ಕೂಡಲೆ ಮಗು ಸತ್ತಿದನ್ನು ಹೇಗೆ ತಿಳಿಯುವುದು ಎಂಬುದನ್ನು ಗೂಗಲ್ ನಲ್ಲಿ ಹುಡುಕಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಗು ನರಳುತ್ತಿದ್ದರೂ ಆಸ್ಪತ್ರೆಗಾಗಲೀ ತುರ್ತು ಸೇವೆಗಾಗಲೀ ಆತ ಕರೆ ಮಾಡಲಿಲ್ಲ.
ಈ ಪಾಪಿ ತಂದೆ ಇದೇ ಸಂದರ್ಭದಲ್ಲಿ ಜಾಲತಣದಲ್ಲಿ ತನ್ನ ಇಬ್ಬರು ಸ್ನೇಹಿತರಲ್ಲಿ ಮಾತನಾಡಿದ್ದ. ಆ ಬಳಿಕ ಆರೋಪಿ ಆಸ್ಪತ್ರೆಗೆ ಕರೆ ಮಾಡಿದ್ದಾನೆ. ಅಷ್ಟ್ರಲ್ಲೇ ಮಗು ಮೃತಪಟ್ಟಿತ್ತು. ಈ ಎಲ್ಲಾ ವಿಚಾರಗಳು ಆತನ ಮೊಬೈಲ್‌ನಲ್ಲಿ ಪತ್ತೆಯಾಗಿವೆ. ಪೊಲೀಸರು ಆರೋಪಿಯ ಅಪಾರ್ಟ್ ಮೆಂಟಲ್ಲಿ ಹುಡುಕಾಡಿದಾಗ ರಕ್ತಸಿಕ್ತ ವಾಗಿದ್ದ ಮಗುವಿನ ಡೈಪರ್ ಪತ್ತೆಯಾಗಿದೆ. ಬಳಿಕ ಮರಣೋತ್ತರ ವರದಿಯಲ್ಲೂ ಮಗುವಿನ ಮೇಲೆ ಅತ್ಯಾಚಾರವಾಗಿದೆ ಹಾಗೂ ಮಗುವಿನ ಜನನಾಂಗದಲ್ಲಿ ಗಾಯಗಳಾಗಿರುವುದು ಕಂಡು ಬಂದಿದೆ. ಇದೀಗ ಆರೋಪಿ ಬಂಧನದಲ್ಲಿದ್ದು ತನಿಖೆ ಮುಂದುವರೆದಿದೆ.