- ಪದ್ಮಾ
ಇತ್ತೀಚೆಗೆ ನಡೆದ ಕಾಂಗ್ರೆಸ್ ಪಾದಯಾತ್ರೆ ಬಹಳ ಚರ್ಚೆಗೆ ದಾರಿ ಮಾಡಿದೆ. ಕಾಂಗ್ರೆಸ್ ಪಕ್ಷ ಕೋವಿಡ್ ಹೆಚ್ಚುತ್ತಿರುವ ಸಂದಭದಲ್ಲಿ ಪಾದಯಾತ್ರೆ ಅಂತಹ ಕಠಿಣ ನಿರ್ಧಾರ ತೆಗೆದುಕೊಂಡಿರುವುದು ತಪ್ಪು ಎಂದು ಅನೇಕರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ಪಾದಯಾತ್ರೆ ಮಾಡುವ ಮುನ್ನ ಕೋವಿಡ್‌ನ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ಯವುದೇ ರೀತಿ ಕೋವಿಡ್ ನಿಯಮಗಳನು ಮೀರುವುದಿಲ್ಲ ಎಂದು ಹೇಳಿದ್ದರು ಆದರೆ ಮೊನ್ನೆ ನಡೆದ ಪಾದಯಾತ್ರೆ ಹೇಗಿತ್ತು ಎಂದರೆ, ಈಗ ಕೋವಿಡ್ ಹೆಚ್ಚಾದಾರೆ ಅದು ಕಾಂಗ್ರೆಸ್ ನವರು ಮಾಡಿದ ಪಾದಯಾತ್ರೆಯಿಂದ ಎಂದು ಜನರು ಹೇಳುವಂತಾಗಿದೆ.
ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ಪಾದಯಾತ್ರೆ ಕುರಿತು ವ್ಯಂಗ್ಯವಾಗಿ ಮಾತನಾಡಿದ್ದಾರೆ. ಕೊರೊನ ಹೆಚ್ಚುತ್ತಿರುವ ಸಮಯದಲ್ಲಿ ರಾಜಕೀಯ ಬದಿಗೊತ್ತಿ ಪಾದಯಾತ್ರೆ ಬಿಡೋದು ಒಳ್ಳೆಯದು ಎಂದು ಹೇಳಿದ್ದರು.ಅದು ಅಲ್ಲದೇ ರಾತ್ರಿ ಆದ ಮೇಲೆ ತೊರಾಡುತ್ತಾ ನಡೆಯೋದು, ರಸ್ತೆಯ ಆ ದಂಡೆಯಿಂದ ಈ ದಂಡೆಗೆ ಹೋಗೋದು ಪಾದಯಾತ್ರೆಯಲ್ಲ ಅಂತಾ ಕುಟುಕಿದ್ದಾರೆ. ಭೀಮೆಯಿಂದ ಪಾದಯಾತ್ರೆ ಮಾಡಿದಾಗ ಹೊಲದಲ್ಲಿ ಮಲಗುತ್ತಿದ್ದೆವು ಮತ್ತು ಜನರು ಕೊಟ್ಟ ಊಟ ಸೇವಿಸುತ್ತಿದ್ದೆವು ಅದರೆ ಈ ಪಾದಯಾತ್ರೆಯಲ್ಲಿ ದಾರಿಯುದ್ದಕ್ಕೊ ಕಬಾಬ್ ಸೆಂಟರ್ಗಳಿವೆ ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ. ಈ ಕಾಂಗ್ರೆಸ್ ಪಾದಯಾತ್ರೆ ಅದರ ಪಾವಿತ್ರ್ಯತೆಯನ್ನು ಕಳೆದುಕೊಂಡಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ಅವರು ಕೂಡ ಆರೋಪಿಸಿದ್ದಾರೆ.