ಗೌರಿ ಗಣೇಶ ಹಬ್ಬದ ಸಂಭ್ರಮ ಎರಡು ದಿನಗಳ ಮುಂಚಿತವಾಗಿಯೇ ಬಲು ಜೋರಾಗಿದೆ..ಮಾರುಕಟ್ಟೆಗೆ ಗೌರಿ ಗಣೇಶನ ಮೂರ್ತಿಗಳು ಕಾಲಿಟ್ಟಿವೆ. ಪಿಒಪಿ ಗಣೇಶನ ಬದಲು ಮಣ್ಣಿನ ಗಣೇಶನ ಮೊರೆ ಹೋಗಿ ಅಂತ ಸರ್ಕಾರ, ಬಿಬಿಎಂಪಿ ಹಾಗೂ ಇತರ ಇಲಾಖೇಗಳೂ ಪ್ರತಿವರ್ಷದಂತೆ ಈ ವರ್ಷವೂ ಹೇಳುತ್ತಲೇ ಇದೆ.. ಈ ನಡುವೆ ಹಿರಿಯ ನಟ ನಟಿಯರೂ ಸಹ ಮಣ್ಣಿಗೆ ಗಣೇಶನ ಬಳಕೆಯ ಮಹತ್ವವನ್ನು ಸಾಮಾಜಿಕ ಜಾಲತಾಣದ ಮೂಲಕ ಸಾರಿಹೇಳಿದ್ದಾರೆ.
ನಟ ಯಶ್, ಮಣ್ಣಿನ ಗಣೇಶನ ಬಳಕೆಯ ಮೂಲಕ ಪ್ರಕೃತಿ ಮಾತೆಯನ್ನು ಕಾಪಾಡಲು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಯಬಿಡುವ ಮೂಲಕ ಕರೆ ನೀಡಿದ್ದಾರೆ. ಎಲ್ಲರಿಗೂ ಹಬ್ಬದ ಶುಭಾಷಯಗಳನ್ನು ಹೇಳಿದ ಯಶ್, ಶ್ರೇಷ್ಟವಾದ ಈ ಹಬ್ಬವನ್ನು ರಾಸಾಯನಿಕ ಮುಕ್ತ ಮಣ್ಣಿನ ಗಣೇಶನ ಬಳಕೆಯ ಮೂಲಕ ಮಾಡಿ. ಪರಿಸರ ಸ್ನೇಹಿ ಗಣೇಶನ ಮೂಲಕ ಪರಿಸರವನ್ನು ಕಾಪಾಡಿ ಎಂದು ಕರೆ ನೀಡಿದ್ದಾರೆ.
ಇದೇ ವೇಳೆ ನಟ ಕಿಚ್ಚ ಸುದೀಪ್ ಸಹ ತಮ್ಮ ಟ್ವಿಟರ್ ಅಕೌಂಟ್‍ನಲ್ಲಿ, ಈ ಬಾರಿ ಪಿಒಪಿ ಗಣೇಶನ ಬಳಕೆ ಬೇಡ ಎಂದು ಕರೆಕೊಟ್ಟಿದ್ದಾರೆ. ಪ್ರಕೃತಿಗೆ ನೋವು ಮಾಡಿದರೆ ಯಾವ ಪರಸ್ಥಿತಿ ನಮಗೆ ಬರುತ್ತದೆ ಎಂಬುದನ್ನು ಈಗಾಗಲೇ ನಾವು ನೋಡಿದ್ದೇವೆ, ಅನುಭವಿಸಿದ್ದೇವೆ. ಆದ್ದರಿಂದ ಈ ಬಾರಿಯ ವಿಘ್ನ ನಿವಾರಕನ ಹಬ್ಬವನ್ನು ನಮ್ಮ ಜವಾಬ್ದಾರಿಯ್ನರಿಯುವ ಮೂಲಕ ಪರಿಸ್ನೇಹಿ ಗಣೇಶನ ಬಳಕೆ ಮಾಡಿ ಆಚರಿಸೋಣ ಎಂದಿದ್ದಾರೆ.