ಪಿಲಿಕುಲ ಸಂಗ್ರಹಾಲಯದಲ್ಲಿ ೧೫ ಕ್ಕೂ ಹೆಚ್ಚು ಜಿಂಕೆಗಳು ಸಾವನ್ನಪ್ಪಿರೋ ವರದಿಯಾಗಿದೆ.ಮಂಗಳೂರಿನ ಪಿಲಿಕುಳದಲ್ಲಿ ಈ ಘಟನೆ ನಡೆದಿದ್ದು ಇದೀಗ ಪ್ರಾಣಿಪ್ರೀಯರ ಆಕ್ರೋಶ ಜೋರಾಗಿದೆ.
ಗುರುವಾರ ತಡರಾತ್ರಿ ಪಿಲಿಕುಲ ಪ್ರಾಣಿ ಸಂಗ್ರಹಾಲಯಕ್ಕೆ ನಾಯಿಗಳ ಗುಂಪು ದಾಳಿ ಮಾಡಿದ್ದು; ಸುಮಾರು ೧೫ ಜಿಂಕೆಗಳನ್ನು ಕಚ್ಚಿ ಗಾಯಮಾಡಿ ಕೊಂದಿದೆ.ಇನ್ನೂ ಸುಮಾರು ಜಿಂಕೆಗಳಿಗೆ ಗಾಯಮಾಡಿದ್ದು ಸಾವಿನ ಸಂಖ್ಯೆ ಹೆಚ್ಚಾಗೋ ಸಾಧ್ಯತೆಯಿದೆ.
ಪ್ರಾಣಿ ಸಂಗ್ರಹಾಲಯದ ಬೇಜವ್ದಾರಿಯಿಂದ ಈ ಘಟನೆ ನಡೆದಿದ್ದು ; ಒಂದು ವೇಳೆ ಜಿಲ್ಲಾಡಳಿದ ಇದನ್ನು ಕೊಲೆ ಪ್ರಕರಣ ಅಂತ ದಾಖಲಿಕೊಂಡಿದ್ದೆ ಆದ್ರೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಗಳಿಗೆ ತಕ್ಕ ಶಿಕ್ಷಯಾಗಲಿದೆ