ನೆರೆ ರಾಷ್ಟ್ರ ಚೀನಾದ ಯಾವುದೇ ಆಕ್ರಮಣಕಾರಿ ಕ್ರಮವನ್ನು ತಡೆಯುವ ನಿಟ್ಟಿನಲ್ಲಿ ಭಾರತ ಪೂರ್ವ ಲಡಾಖ್‍ನ ಸೂಕ್ಷ್ಮ ಪ್ರದೇಶಗಳಲ್ಲಿ ತನ್ನ ವಾಯು ಪಡೆಯನ್ನು ನಿಯೋಜಿಸಿದೆ. ಜೂ.15 ರಂದು ಗಾಲ್ವಾನ್ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಚೀನಾದ ಕಮಾಂಡಿಗ್ ಆಫೀಸರ್ ಸೇರಿದಂತೆ 40 ಕ್ಕೂ ಹೆಚ್ಚು ಯೋಧರ ಮರಣ ಹೊಂದಿದ್ದಾರೆ ಎಂದು ವರದಿಯಾಗಿದೆ.
ಈ ಘರ್ಷಣೆಯಿಂದಾಗಿ ಮುಂದಿನ ದಿನಗಳಲ್ಲಿ ಬರುವ ಎಲ್ಲಾ ಸಂಭವನೀಯತೆಗಳಿಗೆ ನಾವು ಸಿದ್ಧವಾಗಿದ್ದೇವೆ ಎಂಬಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಈ ವಾಯು ಪಡೆ ನಿಯೋಜನೆ ಮಾಡಿ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಎಲ್‍ಎಸಿಯಲ್ಲಿ ಕಟ್ಟುನಿಟ್ಟಿನ ಪಹರೆ ನಡೆಸಲಾಗುತ್ತಿದೆ. ಜತೆಗೆ ಗಡಿಯಲ್ಲಿ ಚೀನಾ ಸೇನಾಪಡೆಯ ಮಿಲಿಟರಿ ರಚನೆಗೆ ಅನುಗುಣವಾಗಿ ಭಾರತ ಕೂಡ ಸೇನೆಯನ್ನು ನಿಯೋಜನೆ ಮಾಡಿದೆ. ಚೀನಾದ ಪಡೆಗಳ ಯಾವುದೇ ಬೆದರಿಕೆಗೆ ಕ್ರಮಗಳಿಗೆ ತಕ್ಷಣ ಉತ್ತರ ನೀಡಲು ಸಂಪೂರ್ಣವಾಗಿ ನಾವು ಸಿದ್ಧವಿದ್ದೇವೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಆರೋಗ್ಯ
ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ
ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.