ನಿರ್ದೇಶಕ ನಂದಕಿಶೋರ್ ಆಕ್ಷನ್ ಕಟ್ ಹೇಳಿ, ಧ್ರುವ ಸರ್ಜಾ ನಾಯಕನಟನಾಗಿ ಕಾಣಿಸಿಕೊಂಡಿರುವ ಚಿತ್ರ ಪೊಗರು..ಈ ಚಿತ್ರದ ಶೂಟಿಂಗ್ ಈಗ ಕ್ಲೈಮ್ಯಾಕ್ಸ್ ಹಂತವನ್ನು ತಲುಪಿದ್ದು, ಹೈದ್ರಾಬಾದ್ ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ನಿರ್ಮಾಪಕರಾದ ಬಿ.ಕೆ.ಗಂಗಾಧರ್ 15 ದಿನಗಳ ಚಿತ್ರೀಕರಣಕ್ಕೆ ಬರೋಬ್ಬರಿ 3 ಕೋಟಿ ಹಣ ವ್ಯಯಿಸಿದ್ದಾರೆ. ಅದ್ರಲ್ಲೂ ಕ್ಲೈಮ್ಯಾಕ್ಸ್ ಸೀನ್ ಫೈಟಿಂಗ್ ಶೂಟಿಂಗ್‍ಗಾಗಿ ವಿಶ್ವದ ನಾಲ್ಕು ಹೆಸರಾಂತ ಬಾಡಿ ಬಿಲ್ಡರ್ಸ್ ರನ್ನು ಸ್ಯಾಂಡಲ್ ವುಡ್ ಗೆ ಕರೆಸಿದ ಕೀರ್ತಿ ಈ ಚಿತ್ರತಂಡಕ್ಕೆ ಸಲ್ಲುತ್ತದೆ. ಅಮೆರಿಕಾದ ಕಾಯ್ ಗ್ರೀನ್,ಸೌತ್ ಆಫ್ರಿಕಾದ ಜಾನ್ ಲುಕ್ ಹಾಗೂ ಜೋನ್ ಲಿಂಡರ್ ಜರ್ಮನಿಯ ಬಾಡಿ ಬಿಲ್ಡರ್ ಜೋ ಲಿಂಡರ್ ಸೇರಿದಂತೆ ಹಲವರು ಈ ಚಿತ್ರಕ್ಕೆ ಸಾಥ್ ನೀಡಿದ್ದಾರೆ.