ಕೊರೋನಾ ವೈರಸ್ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ಜಾಸ್ತಿ ಮಾಡುತ್ತಿದೆ . ಇತ್ತ ಸೋಂಕಿತರ ಸಂಖ್ಯೆ ಜಾಸ್ತಿಯಾಗೋದರ ಜೊತೆಗೆ ಸಾವಿನ ಸಂಖ್ಯೆಯಲ್ಲೂ ಏರಿಕೆ ಕಾಣ್ತಾ ಇದೆ. ಗುರುವಾರ ಬೆಂಗಳೂರಿನಲ್ಲಿ ೧೦ ಪೊಲೀಸರಿಗೆ ಕೊರೋನಾ ಪಾಸಿಟಿವ್ ದೃಢ ಪಟ್ಟಿದ್ದು ಮತ್ತಷ್ಟು ಆತಂಕ ಮನೆ ಮಾಡಿದೆ.
ಈಗಾಗಲೇ ಸುದ್ದಗುಂಟೆ ಪೊಲೀಸ್ ಠಾಣೆಯಲ್ಲಿ ೭ ಮಂದಿ ಪೊಲೀಸರಿಗೆ, ಕುಮಾರ ಸ್ವಾಮಿ ಲೇಔಟ್ ಟ್ರಾಫಿಕ್ ಠಾಣೆಯಲ್ಲಿ ಓರ್ವ ಪೇದೆಗೆ , ಸಿಟಿ ಮಾರ್ಕೆಟ್ ಸ್ಟೇಷನ್ ನಲ್ಲಿ ಓರ್ವ ಪೇದೆ , ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ಓರ್ವ ಪೇದೆಗೆ ಪಾಸಿಟಿವ್ ಕಂಡುಬಂದಿದ್ದು ; ಈ ಹಿನ್ನಲೆ ನಗರದ ೨೦ ಪೊಲೀಸ್ ಠಾಣೆಗಳು ಸೀಲ್ ಡೌನ್ ಆಗಿದೆ.
ಬೆಂಗಳೂರಿನಲ್ಲಿ ಈವರೆಗೆ ೨೧೦ ಪೊಲೀಸರಿಗೆ ಸೋಂಕು ದೃಢಪಟ್ಟಿದ್ದು ,೫ ಪೊಲೀಸರು ಕೊರೋನಾದಿಂದ ಸಾವನ್ನಪ್ಪಿದ್ದಾರೆ. ೧೩೬ ಪೊಲೀಸರಿಗೆ ಚಿಕಿತ್ಸೆ ಮುಂದುವರಿಯುತ್ತಿದ್ದು ; ೬೯ ಪೊಲೀಸರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ..
ಈಗಾಗಲೇ ಸೋಂಕಿತರ ಸಂಪರ್ಕದಲ್ಲಿದ್ದ ೫೫೦ ಪೊಲೀಸರು ಕ್ವಾರಂಟೈನ್ ಗೆ ಒಳಗಾಗಿದ್ದಾರೆ.ಇನ್ನುಳಿದಂತೆ ೨೧೭ ಪೊಲೀಸರು ಸಾಂಸ್ಥಿಕ ಕ್ವಾರಂಟೈನ್ ಗೆ ಒಳಗಾಗಿದ್ದು, ೨೭೯ ಪೊಲೀಸರು ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.