Visit Channel

ಪೋಲೀಸರ ಕಾರ್ಯಕ್ಕೆ ಧನ್ಯವಾದ ಅರ್ಪಿಸಿದ ರೂಪಾ

59641300

ಬೆಂಗಳೂರು, . 24: ಅನೇಕ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪಾದಚಾರಿಗಳನ್ನು ದೋಚುತ್ತಿರುವ ವಿಡಿಯೋ ಹರಿದಾಡುತ್ತಿತ್ತು. ಇದನ್ನು ಗಮನಿಸಿದ ಬೆಂಗಳೂರು ಪೊಲೀಸ್, ಚಿಕ್ಕಪೇಟೆ ಪೊಲೀಸ್, ಪಶ್ಚಿಮ ವಲಯ ಡಿಸಿಪಿ, ನಗರ ಪೊಲೀಸ್ ಆಯುಕ್ತರು ಆ ವ್ಯಕ್ತಿಗಳನ್ನು ಬಂಧಿಸಲಾಗಿದೆ.   ಇದನ್ನು ಗಮನಿಸಿದ ಕರ್ನಾಟಕದ ಗೃಹ ಕಾರ್ಯದರ್ಶಿ ಐ.ಜಿ.ಪಿ ಡಿ ರೂಪಾ ಅವರಿಗೆಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

ಇತ್ತೀಚೆಗಷ್ಟೆ ಚಿಕ್ಕಪೇಟೆ ಬಳಿ ಹಾಡಹಗಲೇ ಪಾದಚಾರಿಗಳಿಗೆ ಚಾಕು ತೋರಿಸಿ ಬೆದರಿಸಿ ದೋಚುತ್ತಿದ್ದರು. ಅದರಲ್ಲಿಯೂ ಒಬ್ಬೊಬ್ಬರೇ ತಿರುಗಾಡುತ್ತಿರುವ ವ್ಯಕ್ತಿಗಳೇ ಇವರ ಮುಖ್ಯ ಗುರಿಯಾಗಿತ್ತು. ಈ ದೃಶ್ಯವನ್ನು ಸೆರೆ ಹಿಡಿದ ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಇದಾದ  ಮೂರು ನಾಲ್ಕು ದಿನಗಳಲ್ಲಿಯೇ ಸಿಸಿಟಿವಿ ದೃಶ್ಯದ ಆಧಾರ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿ ತ್ವರಿತವಾಗಿ ಬಂಧಿಸಲಾಗಿದೆ.

ಚಿಕ್ಕಪೇಟೆ ಮೆಟ್ರೋ ರೈಲು ನಿಲ್ದಾಣದ ಬಳಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟುವ ಇಬ್ಬರು ಬಾಲಕರು ಚಾಕು ತೋರಿಸಿ ಹಣ ದೋಚುವ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಕ್ರಮ ಜರುಗಿಸುವಂತೆ ರೂಪಾ ಅವರು ಸಂಬಂಧಪಟ್ಟ ಪೊಲೀಸರಿಗೆ ಟ್ಯಾಗ್ ಮಾಡಿ ಟ್ವೀಟ್‌ ಮಾಡಿದ್ದರು. ಡಿಸಿಪಿ ಪಶ್ಚಿಮ ವಲಯ ಡಾ. ಸಂಜೀವ್ ಪಾಟೀಲ್ ಅವರ ಸೂಚನೆಯಂತೆ ಚಿಕ್ಕಪೇಟೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ನಾಪತ್ತೆಯಾಗಿದ್ದಾನೆ. ಇಬ್ಬರು ಒಂದೇ ರೀತಿ ಹುಡ್ ಮಾದರಿ ಡ್ರೆಸ್ ಧರಿಸಿ ಚಾಕು ಹಿಡಿದು ಬೆದರಿಸುವ ದೃಶ್ಯವನ್ನು ಅಲ್ಲಿ ಪಾರ್ಕ್ ಮಾಡಿದ್ದ ವಾಹನದಲ್ಲಿದವರು ವಿಡಿಯೋ ಮಾಡಿದ್ದರು.

ಬಂಧಿತನನ್ನು ಆಜಾದ್ ನಗರದ ನಿವಾಸಿ ಜಾನಿ ಎಂದು ಗುರುತಿಸಲಾಗಿದೆ. 22 ವರ್ಷ ವಯಸ್ಸಿನ ಜಾನಿ ಇತ್ತೀಚೆಗೆ ಮಾರ್ಚ್ ತಿಂಗಳಿನಲ್ಲಿ ಇದೇ ರೀತಿ ಕೃತ್ಯ ಎಸಗಿ ಬಂಧಿತನಾಗಿದ್ದ, ಜೈಲಿನಿಂದ ಬಿಡುಗಡೆಯಾದ ಬಳಿಕವೂ ಅದೇ ಚಾಳಿಯನ್ನು ಮುಂದುವರಿಸಿದ್ದಾನೆ ಎಂಬುದು ತಿಳಿದು ಬಂದಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.