ಮೈಸೂರು,ಸೆ.12: ಅದ್ಯಾಕೋ ನಮ್ ಕುಮಾರಣ್ಣನವರು ಏನೇ ಸಂಭವಿಸಿದ್ರೂ ಅದೆಲ್ಲದಕ್ಕೂ ಮೋದಿಜೀ ಕಾರಣ ಅನ್ನೋದಿಕ್ಕೆ ಶುರುಮಾಡಿದಂತಿದೆ.. ಮೈಸೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಪ್ರಧಾನಿ ಮೋದಿಯವರ ಬಗ್ಗೆ ಹೀಗೊಂದು ಟೇಕೆ ಮಾಡಿದ್ದಾರೆ..ಹೌದು..ಚಂದ್ರ್ರಯಾನ ವಿಚಾರದಲ್ಲಿ ಪ್ರಚಾರ ಗಿಟ್ಟಿಸೋದಕ್ಕೆ ಹೋಗಿ ಮೋದಿ ಎಡವಿದ್ದಾರೆ..ವಿಜ್ಞಾನಿಗಳ ಹೆಸರು ಹಾಳುಮಾಡಿದ್ದಾರೆ. ಮೋದಿ ಕಾಲಿಟ್ಟಲ್ಲೆಲ್ಲಾ ಹಾಳು ಎಂಬಂತೆ, ಮೋದಿ ಅವರ ಕಾಲ ಗಳಿಗೆಯಿಂದಾಗಿ ವಿಜ್ಞಾನಿಗಳಿಗೂ ಅಪಶಕುನವಾದಂತಿದೆ. ಚಂದ್ರಯಾನ-2ರ ವಿಫಲವಾಗಿದ್ದಕ್ಕೆ ಮೋದಿಯವರೇ ನೇರ ಕಾರಣವೆಂಬುದಾಗಿ ಟೀಕೆ ಮಾಡಿದ್ದಾರೆ.
ಇನ್ನು ರಾಜ್ಯ ನೆರೆ ಪರಿಹಾರಕ್ಕೆ ಹಣ ಬಿಡುಗಡೆ ಮಾಡದಿರುವುದನ್ನು ಪ್ರಶ್ನಿಸಿರುವ ಮಾಜಿ ಸಿಎಂ,ಕೇಳಿದ 3800 ಕೋಟಿ ಪರಿಹಾರವನ್ನೂ ಈವರೆಗೂ ಕೊಟ್ಟಿಲ್ಲ,ಕಂದಾಯ ಸಚಿವರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ಇದೇ ತಪ್ಪು ನನ್ನಿಂದ ಆಗಿದ್ದರೆ ಯಾರಾದರೂ ಸುಮ್ಮನಿರುತ್ತಿದ್ದರಾ ಎಂದು ಕಿಡಿಕಾರಿದ್ದಾರೆ. ಕೇಂದ್ರದಲ್ಲಿ ಹಣದ ಕೊರೆತಯಿಲ್ಲ, ರಷ್ಯಾದಲ್ಲಿ ಹೋಗಿ 7000 ಕೋಟಿ ಹಣ ಪರಿಹಾರ ನೀಡಿರುವ ಮೋದಿಯವರು, ನಮ್ಮ ರಾಜ್ಯದತ್ತ ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯ ಎಂದರು..