vijaya times advertisements
Visit Channel

ಫೇಸ್‌ಶೀಲ್ಡ್‌ vs ಫೇಸ್‌ಮಾಸ್ಕ್‌

Portrait of young Indian businessman with mask and face shield for protection from corona virus outbreak in the city streets outdoors

ವಾಷಿಂಗ್ಟನ್: ಕೋವಿಡ್‌ ವೈರಸ್‌ನಿಂದ ಚಾಲ್ತಿಗೆ ಬಂದ ಫೇಸ್‌ ಮಾಸ್ಕ್‌ ಬಳಿಕ ಇದೀಗ ಫೇಸ್‌ ಶೀಲ್ಡ್‌ಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ. ಆದರೆ ಮಾಸ್ಕ್‌ಗಿಂತ ಫೇಸ್ ಶೀಲ್ಡ್ ಎಷ್ಟು ಸುರಕ್ಷಿತ? ಎಂಬ ಪ್ರಶ್ನೆಗೆ ತಜ್ಞರು ಉತ್ತರ ನೀಡಿದ್ದಾರೆ.

ಫೇಸ್‌ ಮಾಸ್ಕ್‌ ಪರಿಣಾಮಕಾರಿಯಾಗಿ ಸೋಂಕಿನ ತಡೆಗೆ ಸಹಕರಿಸಬಹುದು ಆದರೆ ಫೇಸ್‌ಶೀಲ್ಡ್‌ ಕೇವಲ ಎದುರಿನ ವ್ಯಕ್ತಿಯಿಂದ ತಾಗಬಹುದಾದ ಡ್ರಾಪ್‌ಲೆಟ್‌ಗಳನ್ನು ತಡೆಯುತ್ತದೆ. ಹೀಗಾಗಿ ಸುರಕ್ಷತೆ ವಿಚಾರದಲ್ಲಿ ಮಾಸ್ಕ್‌ ಹಾಗೂ ಶೀಲ್ಡ್‌ ನಡುವೆ ಹೆಚ್ಚು ಪರಿಣಾಮಕಾರಿಯಾಗಿ ಮಾಸ್ಕ್‌ ಕೆಲಸ ನಿರ್ವಹಿಸಬಹುದು. ಯಾರು ಹೆಚ್ಚುವರಿ ಸುರಕ್ಷತೆಯನ್ನು ಅಪೇಕ್ಷಿಸುತ್ತಾರೆಯೋ ಅಂತಹವರು ಮಾಸ್ಕ್ ನೊಂದಿಗೆ ಫೇಸ್ ಶೀಲ್ಡ್ ಧರಿಸಬಹುದು. ಆದರೆ ಮಾಸ್ಕ್‌ಗೆ ಹೆಚ್ಚಿನ ಪ್ರಾಮುಖ್ಯೆತೆ ನೀಡಿದ ತಜ್ಞರು ಶೀಲ್ಡ್‌ನ್ನು ಹೆಚ್ಚಾಗಿ ಸೂಚಿಸುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಫೇಸ್ ಶೀಲ್ಡ್ ಉಪಯೋಗಗಳು?
ಯಾವುದೇ ವ್ಯಕ್ತಿಯೊಂದಿಗೆ ಸಂವಹನ ನಡೆಸುವ ಸಂದರ್ಭದಲ್ಲಿ ಬರಬಹುದಾದ ಉಗುಳು (ಡ್ರಾಪ್ಲೆಟ್ಸ್‌)ಗಳನ್ನು ತಡೆಯಲು ಫೇಸ್ ಶೀಲ್ಡ್ ಗಳನ್ನು ಸಾಕಷ್ಟು ನೆರವಾಗುತ್ತದೆ.
ಅಲ್ಲದೇ ನಮ್ಮ ಕೈಗಳನ್ನು ಪದೇ ಪದೇ ಮುಖ, ಕಣ್ಣು, ಮೂಗು ಮುಟ್ಟಿಕೊಳ್ಳುವುದರಿಂದ ತಡೆಯುತ್ತದೆ. ಇದರಿಂದ ಸೋಂಕು ನಮ್ಮ ದೇಹ ಸೇರುವುದನ್ನು ಒಂದು ಹಂತದವರೆಗೂ ತಡೆಯಬಹುದು

Latest News

ರಾಜ್ಯ

POCSO ಪ್ರಕರಣದಲ್ಲಿ ಅಮಾಯಕನನ್ನು ಬಂಧಿಸಿದ ಪೊಲೀಸರಿಗೆ 5 ಲಕ್ಷ ದಂಡ ವಿಧಿಸಿದ ಮಂಗಳೂರು ಜಿಲ್ಲಾ ನ್ಯಾಯಾಲಯ!

ಇದೇ ವೇಳೆ ಇಬ್ಬರೂ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ರಾಜ್ಯ

ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ 15 ಲಕ್ಷ ರೂ. ಪರಿಹಾರ : ಸಿಎಂ ಬೊಮ್ಮಾಯಿ

ಬೆಂಗಳೂರು ಮತ್ತು ಮೈಸೂರು ವಲಯದಲ್ಲಿ(Mysuru Zone) ಆನೆ ಕಾರಿಡಾರ್ ಸುತ್ತಲೂ ಚಿರತೆಗಳಿವೆ. ಚಿರತೆ ದಾಳಿ ತಡೆಯಲು ವಿಶೇಷ ತಂಡವನ್ನು ರಚಿಸಲಾಗಿದೆ ಮತ್ತು ನಿರ್ದಿಷ್ಟ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.

ದೇಶ-ವಿದೇಶ

ಹೃದಯಾಘಾತದಿಂದ ಬಸ್ ಚಾಲಕ ಸಾವು ; ಅನ್ಯ ವಾಹನಗಳಿಗೆ ಡಿಕ್ಕಿ ಸ್ಥಳದಲ್ಲೇ ಇಬ್ಬರು ಸಾವು!

ಬಸ್ ಚಾಲಕ ಹಠಾತ್ ಸಾವನ್ನಪ್ಪಿದ ಬೆನ್ನಲ್ಲೇ ಬಸ್ ನಿಯಂತ್ರಣ ಕಳೆದುಕೊಂಡು ಇತರ ವಾಹನಗಳಿಗೆ ಡಿಕ್ಕಿ ಹೊಡೆಯುವುದನ್ನು ದೃಶ್ಯದಲ್ಲಿ ಕಾಣಬಹುದು.

ಮನರಂಜನೆ

ಕನ್ನಡ ಚಿತ್ರರಂಗದಿಂದ ರಶ್ಮಿಕಾ ಮಂದಣ್ಣ ಬ್ಯಾನ್? ; ಅಷ್ಟಕ್ಕೂ ಅಸಲಿ ಕಾರಣವೇನು?

ತೆಲುಗು ಸಿನಿಮಾದ ಖ್ಯಾತ ಸಿನಿಮಾ ಪತ್ರಕರ್ತ,ಬರಹಗಾರ,ಸಿನಿಮಾ ವಿಮರ್ಶಕ ತೋಟಾ ಪ್ರಸಾದ್ (Thota Prasad) ರಶ್ಮಿಕ ಅವರ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ.