ಫೋಟೋಗ್ರಫಿಯಲ್ಲಿ ಅನಿಲ್ ಕುಂಬ್ಳೆ ಪುತ್ರನ ಸಾಧನೆ

ಬೆಂಗಳೂರು: ವಿಶ್ವಕ್ರಿಕೆಟ್‍ನಲ್ಲಿ ತಮ್ಮದೇ ಛಾಪು ಮೂಡಿಸಿರುದ್ದ ಶ್ರೇಷ್ಠ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರ ಪುತ್ರ ಮಾಯಾಸ್ ಕುಂಬ್ಳೆ ತಂದೆಯ ವೃತ್ತಿ ಜೀವನಕ್ಕಿಂತ ತಂದೆಯ ಹವ್ಯಾಸವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಕ್ರಿಕೆಟ್‍ ಜೊತೆಗೆ ಫೋಟೋಗ್ರಫಿಯನ್ನು ಹವ್ಯಾಸವಾಗಿ ಮಾಡಿಕೊಂಡಿರುವ ಅನಿಲ್ ಕುಂಬ್ಳೆ, ಸುಂದರ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಮೂಲಕ ತಮ್ಮ ಕೈಚಳಕ ತೋರಿಸಿ ಎಲ್ಲರ ಮನಗೆದ್ದಿದ್ದಾರೆ. ಇದೀಗ ತಂದೆ ಹಾದಿಯಲ್ಲೇ ಸಾಗುವ ಮುನ್ಸೂಚನೆ ನೀಡಿರುವ ಅನಿಲ್ ಕುಂಬ್ಳೆ ಅವರ ಪುತ್ರ ಮಯಾಸ್‍ ಕುಂಬ್ಳೆ ಸೆರೆಹಿಡಿದಿರುವ ಛಾಯಾಚಿತ್ರವೊಂದು ಅಂತಾರಾಷ್ಟ್ರೀಯ ಫೋಟೋಗ್ರಫಿ ನಿಯತಕಾಲಿಕೆ “ನೇಚರ್ ಇನ್ ಫೋಕಸ್”ನಲ್ಲಿ ಪ್ರಕಟವಾಗಿದೆ. ಈ ಬಗ್ಗೆ ಅನಿಲ್ ಕುಂಬ್ಳೆ ಟ್ವೀಟ್ ಮೂಲಕ ಹೆಮ್ಮೆಯಿಂದ ಸಂತಸವನ್ನು ಹಂಚಿಕೊಂಡಿದ್ದಾರೆ.

ಮಾಯಾಸ್ ಫೋಟೋಗ್ರಫಿ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದು ಅದರಲ್ಲೇ ಸಾಧಿಸುವ ಛಲಹೊಂದಿದ್ದಾರೆ. ಅದಕ್ಕೆ ಪೂರಕವಾಗಿ ಅಂತಾರಾಷ್ಟ್ರೀಯ ಫೋಟೋಗ್ರಫಿ ನಿಯತಕಾಲಿಕೆಯಲ್ಲಿ ಸಚಿತ್ರ ಲೇಖನ ಪ್ರಕಟಗೊಂಡಿದೆ. “ನೇಚರ್ ಇನ್ ಫೋಕಸ್” ನಿಯತಕಾಲಿಕೆಯಲ್ಲಿ 16 ವರ್ಷದ ಮಾಯಾಸ್ ಕುಂಬ್ಳೆ ಛಾಯಾಚಿತ್ರಗಳು ಹಾಗೂ ಲೇಖನ ಪ್ರಕಟವಾಗಿದೆ. 2014ರಿಂದ ದಕ್ಷಿಣ ಏಷ್ಯಾದ ಹವ್ಯಾಸಿ ಛಾಯಾಗ್ರಾಹಕರಿಗೆ ‘ನೇಚರ್ ಇನ್ ಫೋಕಸ್’ ವಿಶೇಷ ವೇದಿಕೆಯನ್ನು ಒದಗಸುತ್ತಿದೆ.

 “ನೇಚರ್ ಇನ್ ಫೋಕಸ್” ಮಹಾರಾಷ್ಟ್ರದ ನಾಗ್ಪುರದಿಂದ 150 ಕಿಲೋ ಮೀಟರ್ ದೂರದಲ್ಲಿರುವ ‘ತಡೋಬಾ ಅಂಧೇರಿ ಟೈಗರ್ ರಿಸರ್ವ್’ನಲ್ಲಿ ಮಾಯಾಸ್ ಕುಂಬ್ಳೆ ಕ್ಲಿಕ್ಕಿಸಿದ ಫೋಟೋಗಳನ್ನು ‘ನೇಚರ್ ಇನ್ ಫೋಕಸ್’ ನಿಯತಕಾಲಿಕೆ ಪ್ರಕಟಿಸಿದೆ. ಕಳೆದ ವರ್ಷ ಪ್ರಯಾಣಿಸಿದ್ದ ವೇಳೆಯ ಫೋಟೋಗಳು ಹಾಗೂ ಆ ಬಗ್ಗೆ ವಿಶೇಷ ಲೇಖನವನ್ನು ಮಾಯಾಸ್ ಕುಂಭ್ಳೆ ವಿವರವಾಗಿ ಬರೆದುಕೊಂಡಿದ್ದಾರೆ. ಮಯಾಸ್ ಕುಂಬ್ಳೆ ತಮ್ಮ ಛಾಯಾಗ್ರಹಣ ಕಲೆಯನ್ನು ಸುಂದರವಾಗಿ ನಿಯತಕಾಲಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ. ತಡೋಬಾ ರಾಷ್ಟ್ರೀಯ ಉದ್ಯಾನದಲ್ಲಿನ ಹುಲಿಗಳ ಚಿತ್ರ ಮಾಯಾಸ್ ಕ್ಯಾಮರಾ ಕಣ್ಣಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಹುಲಿಗಳ ಜೊತೆಗೆ ಜಿಂಕೆ, ಕಾಡುಕೋಣ, ತೋಳ, ಕರಡಿ, ಚಿಗರೆ ಹದ್ದು ಸೇರಿದಂತೆ ಒಟ್ಟು 13 ಫೋಟೋಗಳು ಪ್ರಕಟವಾಗಿದೆ.

Latest News

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.