ಫ್ರಾನ್ಸ್‍ನ ನೂತನ ಪ್ರಧಾನ ಮಂತ್ರಿಯಾಗಿ ಜೀನ್ ಕ್ಯಾಸ್ಟಕ್ಸ್ ಅವರು ಆಯ್ಕೆಯಾಗಿದ್ದಾರೆ.
ಮೂರು ನಾಲ್ಕು ವರ್ಷಗಳಿಂದ ಫ್ರಾನ್ಸ್ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದಕ್ಕಾಗಿ ಪ್ರಧಾನಿ ಸ್ಥಾನದಲ್ಲಿ ಬದಲಾವಣೆ ತರಲಾಗಿದೆ. ಇತೆಗೆ ಅಧ್ಯಕ್ಷ ಮ್ಯಾಕ್ರೊನ್ ಆಡಳಿತ ಸುಧಾರಣೆ ಮಾಡಲು ಮುಂದಾಗಿದೆ. ಜತೆಗೆ ನೂತನ ಪ್ರಧಾನ ಮಂತ್ರಿ ಶೀಘ್ರದಲ್ಲೇ ಸಂಪುಟ ರಚನೆ ಮಾಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕೋವಿಡ್-19 ವೈರಸ್ ಸೋಂಕಿನಿಂದಾಗಿ ಲಾಕ್‍ಡೌನ್ ವೇಳೆ ಫ್ರಾನ್ಸ್‍ನ ಆರ್ಥಿಕ ಕುಸಿತದಿಂದಾಗಿ ಏಪ್ರಿಲ್‍ನಲ್ಲಿ ಮ್ಯಾಕ್ರೊನ್ ಎಡ್ವರ್ಡ್ ಫಿಲಿಫ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಕ್ಯಾಸ್ಟೆಕ್ಸ್ ಅವರ ಹೆಸರನ್ನು ಸೂಚಿಸಿದ್ದಾರೆ. ನಿನ್ನೆ ನಡೆದ(ಜು.3 ರಂದು) ಸಮಾರಂಭದಲ್ಲಿ ಫಿಲಿಕ್ ಕ್ಯಾಸ್ಟೆಕ್ಸ್ ಅವರಿಗೆ ಪ್ರಧಾನಿ ಸ್ಥಾನವನ್ನು ವರ್ಗಾಯಿಸಲಾಗಿದೆ.
2022ರ ಚುನಾವಣೆಗೆ ಮುಂಚಿತವಾಗಿ ಅಧ್ಯಕ್ಷ ಸ್ಥಾನವನ್ನು ಗಟ್ಟಿಗೊಳಿಸುವ ಮತ್ತು ಕರೋನಾ ವೈರಸ್ ಬಿಕ್ಕಟ್ಟಿನಿಂದ ಆರ್ಥಿಕ ಚೇತರಿಕೆ ಪ್ರಾರಂಭಿಸುವ ಉದ್ದೇಶದಿಂದ ಫ್ರಾನ್ಸ್‍ನ ಅಧ್ಯಕ್ಷ ಮ್ಯಾಕ್ರೊನ್ ಲಾಕ್‍ಡೌನ್ ತಜ್ಞ ಜೀನ್ ಕ್ಯಾಸ್ಟೆಕ್ಸ್ರ ನ್ನು ಫ್ರಾನ್ಸ್ ಪ್ರಧಾನಿಯಾಗಿ ಆಯ್ಕೆ ಮಾಡಿದೆ.
ಇನ್ನು ನೂತನ ಪ್ರಧಾನಿ ಕ್ಯಾಸ್ಟೆಕ್ಸ್ ಮಾತನಾಡಿ ಕರೋನಾ ವೈರಸ್ ಆತಂಕ ಇನ್ನು ಮುಗಿದಿಲ್ಲ, ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟು ಹೆಚ್ಚಾಗಿದೆ. ಈ ವೇಳೆಯಲ್ಲಿ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಹೇಳಿದ್ದಾರೆ.