ಮೆದಳು ತಿನ್ನುವ ಅಪರೂಪದ ಅಮೀಬಾ ಒಂದು ಫ್ಲೊರಿಡಾದಲ್ಲಿ ಪತ್ತೆಯಾಗಿದೆ.ಇದರ ಹೆಸರು ನೆಗ್ಲೇರಿಂಯಾ ಫೌಲೆರಿ. ಈ ನೆಗ್ಲೇರಿಯಾ ಫೌಲೆರಿ ಮೆದುಳಿನ ಅಪರೂಪದ ಮತ್ತು ವಿನಾಶಕಾರಿ ಸೋಂಕನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಟ್ಯಾಂಪಾ ಪ್ರದೇಶದ ವ್ಯಕ್ತಿಯೊಬ್ಬ ಅಪರೂಪದ ಮೆದುಳು ತಿನ್ನುವ ಸೋಂಕಿಗೆ ಒಳಗಾಗಿರುವುದು ತಿಳಿದು ಬಂದಿದೆ ಎಂದು ಫ್ಲೋರಿಡಾ ಆರೋಗ್ಯ ಇಲಾಖೆ ಖಚಿತ ಮಾಹಿತಿ ನೀಡಿದೆ. ಈ ಸೋಂಕು ಮೆದುಳಿನ ಅಂಗಾಂಶದ ಮೇಲೆ ದಾಳಿ ಮಾಡುವ ಮತ್ತು ಮೆದುಳು ತಿನ್ನುವ ಅಮೀಬಾ (ಏಕಕೋಶಿಯ ಜೀವಂತ ಜೀವಿ)ಎಂದು ಕರೆಯಲಾಗುವ ನೇಗ್ಲೆರಿಯಾ ಫೌಲೆರಿ ಸೋಂಕಾಗಿದ್ದು ಅತ್ಯಂತ ಅಪಾಯಕಾರಿ ಸೋಂಕಾಗಿದೆ. ಈ ಜೀವಿ ಸಾಮಾನ್ಯವಾಗಿ ಬೆಚ್ಚಗಿನ ಸಿಹಿನೀರಿನಲ್ಲಿ ಮತ್ತು ಮಣ್ಣಿನಲ್ಲಿ(ಸರೋವರಗಳು,ನದಿಗಳು ಮತ್ತು ಬಿಸಿಣಿರಿನ ಬುಗ್ಗೆಗಳು) ಕಂಡು ಬರುತ್ತದೆ. ಮೂಗಿನ ಮೂಲಕ ಮನುಷ್ಯನ ದೇಹ ಸೇರಿದಾಗ ವ್ಯಕ್ತಿಗೆ ಈ ನೆಗ್ಲೇರಿಯ ಫೌಲೆರಿ ಸೋಂಕು ತಗುಲುತ್ತದೆ. ಇದು ಮೆದುಳಿನ ಉರಿಯೂತ ಮತ್ತು ಮೆದುಳಿನ ಅಂಗಾಂಶಗಳ ನಾಶಕ್ಕೆ ಕಾರಣವಾಗುತ್ತದೆ. ಫ್ಲೋರೊಡಾದಲ್ಲಿ ಹಿಲ್ಸ್ಬರೋ ಕೌಂಟಿಯ ಎಂಬ ವ್ಯಕ್ತಿ ಈ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕು ಕಂಡುಬಂದಿರುವುದರಿಂದ ಅಲ್ಲಿನ ಪ್ರದೇಶಗಳಲ್ಲಿ ನಲ್ಲಿಗಳು, ನದಿಗಳು, ಸರೋವರಗಳು, ಕೊಳಗಳು ಮತ್ತು ಕಾಲುವೆಗಳಂತಹ ನೀರಿನ ಸ್ಥಳಗಳಲ್ಲಿ ನೀರಿನೊಂದಿಗೆ ಮೂಗಿನ ಸಂಪರ್ಕ ತಪ್ಪಿಸಲು ಆರೋಗ್ಯ ಅಧಿಕಾರಿಗಳು ಸ್ಥಳಿಯರಿಗೆ ತಿಳಿಸಿದ್ದಾರೆ.
ನೆಗ್ಲೇರಿಯಾ ಫೌಲೆರಿ ಸೋಂಕಿನ ಲಕ್ಷಣಗಳು
ಈ ಸೋಂಕು ಪ್ರೈಮೆರಿ ಅಮೆಬಿಕ್ ಮೆನಿಂಗೊಎನ್ಸೆಫಾಲಿಟನ್ ಎಂಬ ಕಾಯಿಯೆಯನ್ನು ಉಂಟುಮಾಡುತ್ತದೆ. ಇದರಿಂದಾಗಿ ಮೆದುಳಿನಲ್ಲಿ ಉರಿ ಊತ ಮತ್ತು ಮೆದುಳಿನ ಅಂಗಾಂಶಗಳು ನಾಶವಾಗುತ್ತವೆ . ಈ ಅಮೀಬಾ ಕಾಣಿಸಿಕೊಂಡ 2 ರಿಂದ 15 ದಿನಗಳಲ್ಲಿ ರೋಗಲಕ್ಷಣಗಳು ಹೆಚ್ಚಾಗುತ್ತವೆ.
ಸಾಮಾನ್ಯ ಲಕ್ಷಣಗಳು
ಜ್ವರ, ಇದ್ದಕ್ಕಿದ್ದ ಆಗೆ ತೀವ್ರ ಮುಂಭಾಗದ ತಲೆ ನೋವು, ವಾಸನೆ ಮತ್ತು ರುಚಿ ಅನುಭವದಲ್ಲಿ ಬದಲಾವಣೆ, ಕುತ್ತಿಗೆ ಸ್ಥಿರವಾಗಿ ಉಳಿಯದಂತಹ ಸ್ಥಿತಿ, ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ, ರೋಗಗ್ರಸ್ತವಾಗುವಿಕೆ, ವಾಕರಿಕೆ, ವಾಂತಿ , ನಿದ್ರೆ ಕೋಮಾದಂತಹ ಲಕ್ಷಣಗಳು ಕಂಡಯಬರುತ್ತದೆ.
ಈ ಲಕ್ಷಣಗಳು ಹೆಚ್ಚಾಗಿ ರೋಗಿ ಒಂದು ವಾರದೊಳಗೆ ಸಾಯಲುಬಹುದು.
ಆರಂಭದಲ್ಲಿ ರೋಗನಿರ್ಣಯ ಮತ್ತು ಚಿಕಿತ್ಸೆ ನೀಡುವುದರಿಂದ ಸಾವು ಸಂಭವಿಸುವುದನ್ನು ತಡೆಯಬಹುದು.ಆದ್ದರಿಂದ ಅಮೀಬಾ ಇರಬಹುದಾಂತರ ಬೆಚ್ಚಗಿನ , ಶುದ್ಧ ನೀರಿನ ಸಂಪರ್ಕದಿಮದ ದೂರವಿರುವಂತೆ ಮುಂಜಾಗೃತಾ ಕ್ರಮಗಳನ್ನು ಅಮೆರಿಕ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ.