ಅಂಜೂರಾ ಹಣ್ಣಿನಲ್ಲಿದೆ ಅನೇಕ ಆರೋಗ್ಯಯುತ ಅಂಶ ಹಾಗೂ ಅದ್ಬುತ ಶಕ್ತಿ. ದಿನಾಲೂ ಈ ಹಣ್ಣುಗಳನ್ನು ತಿಂದರೆ ಅಧಿಕ ರತ್ತದೊತ್ತಡ ಕಡಿಮೆಯಾಗುತ್ತದೆ. ಅಂಜೂರಾದಲ್ಲಿ ಮೆಗ್ನೇಷಿಯಂ, ಮ್ಯಾಂಗನೀಸ್, ಜಿಂಕ್, ಖನಿಜಗಳು ಯಥೇಚ್ಛವಾಗಿವೆ. ಹಾಗಾಗಿ ಬಂಜೆತನ ನಿವಾರಣಾ ಶಕ್ತಿಯೂ ಇದರಲ್ಲಿದೆ. ಇದನ್ನು ನಿತ್ಯ ಸೇವಿಸುವುದರಿಂದ ರಕ್ತಹೀನತೆ ಸಮಸ್ಯೆಗೆ ಮುಕ್ತಿ ಸಿಗುತ್ತದೆ.
ಅಂಜೂರ ಅಧಿಕ ಪ್ರಮಾಣದಲ್ಲಿ ಕ್ಯಾಲ್ಸಿಯಂ ಒಳಗೊಂಡಿದ್ದು ಮೂಳೆಗಳ ಶಕ್ತಿವರ್ಧನೆಗೆ ಉಪಯುಕ್ತವಾಗಿದೆ. ಮಾನಸಿಕ ಹಾಗೂ ದೈಹಿಕವಾಗಿ ಈ ಹಣ್ಣು ಹೊಸ ಚೈತನ್ಯವನ್ನು ನೀಡುತ್ತದೆ. ಅಂಜೂರದ ನಾಲ್ಕೈದು ಒಣ ಹಣ್ಣುಗಳನ್ನು ರಾತ್ರಿ ಹಾಲಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾ ಬಂದರೆ ಚರ್ಮದ ಕಾಂತಿ ಹೆಚ್ಚುತ್ತದೆ, ರಕ್ತ ಹೀನತೆ ದೂರಾಗುತ್ತದೆ. ದೇಹಕ್ಕೆ ಶಕ್ತಿ ನೀಡುತ್ತದೆ. ಪುರುಷರಿಗೆ ವೀರ್ಯ ವೃದ್ದಿಯಾಗುತ್ತದೆ.
ಜೀರ್ಣಶಕ್ತಿಗೆ, ದೇಹದ ತೂಕ ನಿಯಂತ್ರಣಕ್ಕೆ, ಮದುಮೇಹ ನಿಯಂತ್ರಣಕ್ಕೆ ಅಂಜೂರದ ಎಲೆಗಳ ಕಷಾಯ ಉತ್ತಮವಾದ ಔಷದಿಯಾಗಿದೆ. ಇದು ನರಗಳಲ್ಲಿ ಶಕ್ತಿ ತುಂಬುತ್ತದೆ. ಹೀಗೆ ಅಂಜೂರವು ನಿತ್ಯದ ಆಹಾರದಲ್ಲಿ ಅದ್ಬುತ ಪರಿಣಾಮಕಾರಿಯಾಗಿದೆ.