ಬೆಂಗಳೂರು, ಅ. 30: ಬೆಂಗಳೂರಿನಲ್ಲಿ ಟ್ರಾಪಿಕ್ ನಿಯಮವನ್ನು ಉಲ್ಲಂಘನೆ ಮಾಡಿ ಹೋಗುವ ಹಲವಾರು ಜನರಿದ್ದಾರೆ. ಕಠಿಣ ಕ್ರಮಗಳಿದ್ದರೂ ಕೆಲವರು ರೂಲ್ಸ್ ಬ್ರೇಕ್ ಮಾಡ್ತಾನೆ ಇರುತ್ತಾರೆ ಅಂತವರಿಗೆ ಇದೊಂದು ಪಾಠವೆಂದರೆ ತಪ್ಪಾಗಲಾರದು. ಪದೇ ಪದೆ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದ ಬೈಕ್ ಸವಾರನನ್ನು ಪೊಲೀಸರು ಹಿಡಿದಿದ್ದಾರೆ. ಆತನ ದಂಡದ ರಶೀದಿ ನೋಡಿ ಸ್ವತಃ ಪೊಲೀಸರೇ ಶಾಕ್ ಆಗಿದ್ದಾರೆ. ಬರೋಬ್ಬರಿ 77 ಬಾರಿ ನಿಯಮ ಉಲ್ಲಂಘಿಸಿ ಸಂಚಾರ ಮಾಡಿರುವ ಪರಿಣಾಮ ಆಸಾಮಿಯ ದಂಡದ ಮೊತ್ತ 42,500 ರೂ. ಆಗಿದೆ. ಹೀಗೆ ಬರೋಬ್ಬರಿ ೭೭ ಬಾರಿ ಸಂಚಾರಿ ನಿಯಮವನ್ನು ಉಲ್ಲಂಘಿಸಿ ಪಾರಾಗಿದ್ದ ಬೈಕ್ ಸವಾರನೊಬ್ಬ ಇದೀಗ ಸಿಕ್ಕಿ ಬಿದ್ದಿದ್ದಾನೆ.
ಮಡಿವಾಳ ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ನವೀನ್ ಕುಮಾರ್ ಮತ್ತು ಪಿಎಸ್ಐ ಶಿವರಾಜ್ ಕುಮಾರ್ ಅಂಗಡಿಯವರು ಬೈಕ್ ಸವಾರ ಅರುಣ್ ಕುಮಾರ್ ರೂಲ್ಸ್ ಬ್ರೇಕ್ ಮಾಡಿದ ಹಳೆಯ ಕೇಸ್ ಬಗ್ಗೆ ಪರಿಶೀಲನೆ ನಡೆಸಿದಾಗ ಸುಮಾರು ೭೭ ಸಲ ನಿಯಮ ಉಲ್ಲಂಘನೆ ಮಾಡಿರುವುದು ಪತ್ತೆಯಾಗಿದೆ. ಈ ಬಗ್ಗೆ ಬೈಕ್ ಸವಾರನಿಂದ ಬರೋಬ್ಬರಿ ೪೨,೫೦೦ ರೂಪಾಯಿಗಳನ್ನು ದಂಡದ ಬಾಬ್ತು ವಸೂಲಿ ಮಾಡಿದ್ದಾರೆ.
ಇನ್ನು ಸ್ವಲ್ಪ ಹಣ ಹಾಕಿದ್ದರೆ ಹೊಸತೊಂದು ಬೈಕನ್ನೇ ಖರೀದಿಸಬಹುದಿತ್ತು. ಆದ್ದರಿಂದ ನಿಯಮ ಉಲ್ಲಂಘನೆ ಮಾಡುವ ಬದಲು ಸಂಚಾರಿ ನಿಯಮಗಳನ್ನು ಪಾಲಿಸಿ ಇನ್ನೊಬ್ಬರಿಗೆ ಮಾದರಿಯಾಗಿ ನಿಯಮಗಳು ಎಲ್ಲರಿಗೂ ಅನ್ವಯವಾಗುವುದು.