• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಬಾಂಬ್ ಬೆದರಿಕೆ ಹಾಕಿದ್ದ ಶಂಕಿತರು ವಶಕ್ಕೆ

Sharadhi by Sharadhi
in ಪ್ರಮುಖ ಸುದ್ದಿ, ರಾಜ್ಯ
ಬಾಂಬ್ ಬೆದರಿಕೆ ಹಾಕಿದ್ದ ಶಂಕಿತರು ವಶಕ್ಕೆ
0
SHARES
0
VIEWS
Share on FacebookShare on Twitter

ಬೆಂಗಳೂರು, ಅ.20: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಸ್‌ ಆರಂಭದಲ್ಲಿಯೇ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಜೈಲು ಪಾಲಾಗಿದ್ದಾರೆ. ಪೊಲೀಸರ ಅತಿಥಿಯಾಗಿ ಜೈಲುವಾಸ ಅನುಭವಿಸುತ್ತಿರುವ ಇವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಅವರಿಗೆ ಜಾಮೀನು ನೀಡದಿದ್ದರೆ ಬಾಂಬ್‌ ಸ್ಫೋಟಿಸುವುದಾಗಿ ಬೆದರಿಕೆ ಪತ್ರವೊಂದು ಬಂದಿರುವುದು ಆಶ್ಚರ್ಯಕರ ಸಂಗತಿ.

‘ಸಂಜನಾ ರಾಗಿಣಿ ಸೇರಿದಂತೆ ಡ್ರಗ್ಸ್‌ ಕೇಸ್‌ನಲ್ಲಿ ಭಾಗಿ ಆಗಿರುವ ಎಲ್ಲರಿಗೂ ಜಾಮೀನು ನೀಡಬೇಕು. ಕೇಸ್‌ನಲ್ಲಿ ಇರುವ ಎಲ್ಲರನ್ನೂ ವಜಾ ಮಾಡಬೇಕು’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಸಿಟಿ ಸಿವಿಲ್ ಸೆಷನ್‌ ಕೋರ್ಟ್‌ನ ಜಡ್ಜ್‌ಗೆ ಈ ಪತ್ರ ಬರೆಯಲಾಗಿತ್ತು. ಒಂದು ವೇಳೆ ಹಾಗೆ ಮಾಡದಿದ್ದರೆ ಕಾರಿನಲ್ಲಿ ಬಾಂಬ್‌ ಇಡುತ್ತೇವೆ ಎಂಬುದಾಗಿಯೂ ಬೆದರಿಕೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.

ಡ್ರಗ್ಸ್‌ ಕೇಸ್‌ ಮಾತ್ರವಲ್ಲದೆ ಡಿಜೆ ಹಳ್ಳಿ ಪ್ರಕರಣದ ತನಿಖೆಯನ್ನು ನಿಲ್ಲಿಸಿ ಎಂಬುದಾಗಿಯೂ ಮತ್ತೊಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ‘ಸಿಸಿಬಿ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಸುಮ್ಮನಿರಬೇಕು. ಇಲ್ಲದಿದ್ದರೆ ಕಮಿಷನರ್‌ ಕಚೇರಿ ಸ್ಫೋಟ ಮಾಡುತ್ತೇವೆ’ ಎಂದು ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಹಮ್ಮದ್‌ ಜೈಷ್‌ ಉಗ್ರ ಸಂಘಟನೆ ಹೆಸರಿನಲ್ಲಿ ಪತ್ರ ಬಂದಿದ್ದು, ಅವರು ಯಾಕೆ ರಾಗಿಣಿ ಮತ್ತು ಸಂಜನಾರ ಜಾಮೀನಿಗಾಗಿ ಬೇಡಿಕೆ ಇಡುತ್ತಾರೆ ಎಂಬ ಪ್ರಶ್ನೆ ಮೂಡಿರುವುದು, ಆಶ್ಚರ್ಯಕರ. ನಿಜಕ್ಕೂ ಇದು ಉಗ್ರ ಸಂಘಟನೆಯ ಪತ್ರವೇ ಅಥವಾ ಯಾರೋ ಮಾನಸಿಕ ಅಸ್ವಸ್ಥರು ಈ ರೀತಿ ಮಾಡಿರಬಹುದೇ ಎಂಬ ಅನುಮಾನ ಕೂಡ ಸೃಷ್ಟಿಯಾಗಿದೆ. ತುಮಕೂರಿನ ಗುಬ್ಬಿ ತಾಲೂಕಿನಿಂದ ಈ ಪತ್ರಗಳು ಬಂದಿವೆ ಎಂದು ಎನ್ನಲಾಗುತ್ತಿತ್ತು.   

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ಆರೋಪಿಗಳ ಬಂಧನಕ್ಕೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿ, ಪತ್ರ ರವಾನೆಯಾಗಿದ್ದ ತುಮಕೂರಿನತ್ತ ತೆರಳಿದ ಒಂದು ತಂಡವು ರಾತ್ರಿ 12 ಗಂಟೆ ಸಮಯದಲ್ಲಿ ಚೇಳೂರಿನಲ್ಲಿ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿತ್ತು ಸಿ ಹರಿವೇಸಂದ್ರ ಗ್ರಾಮದ ರಮೇಶ್ ಹಾಗೂ ಚನ್ನಬಸವ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ರಾತ್ರಿಯಿಡೀ ತೀವ್ರ ವಿಚಾರಣೆ ನಡೆಸಿದರು.

ಅವರು ನೀಡಿದ ಮಾಹಿತಿ ಮೇರೆಗೆ ತಿಪಟೂರಿನ ಲಿಂಗದಹಳ್ಳಿ ನಿವಾಸಿ ರಾಜಶೇಖರ್ ಮತ್ತು ಹಾಗಲವಾಡಿಯ ವೇದಾಂತ್ ಎಂಬುವರನ್ನು ತಡರಾತ್ರಿ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಯಿತು. ರಾಜಶೇಖರ, ವೇದಾಂತ್ ಮತ್ತು ರಮೇಶನ ನಡುವೆ ಆಸ್ತಿ ವಿವಾದವಿತ್ತು. ರಮೇಶನ ಕುಟುಂಬದವರು ಅವಿದ್ಯಾವಂತರಾಗಿದ್ದಾರೆ.

ಗುಬ್ಬಿ , ಚೇಳೂರು ಪೊಲೀಸರ ಸಹಕಾರದೊಂದಿಗೆ ಸಿಸಿಬಿ ಪೊಲೀಸರು ಈಗಾಗಲೇ ಹಲವಾರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Related News

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್-ಜೆಡಿಎಸ್‌ಗೆ ಆತಂಕ ತಂದ ಬಿಜೆಪಿ ತಂತ್ರಗಾರಿಕೆ‌
ರಾಜಕೀಯ

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್-ಜೆಡಿಎಸ್‌ಗೆ ಆತಂಕ ತಂದ ಬಿಜೆಪಿ ತಂತ್ರಗಾರಿಕೆ‌

March 30, 2023
300 ಯೂನಿಟ್ ಉಚಿತ ವಿದ್ಯುತ್, 2 ಲಕ್ಷ ಉದ್ಯೋಗ ಸೃಷ್ಟಿ ; ಪ್ರಣಾಳಿಕೆ ಬಿಡುಗಡೆ ಮಾಡಿದ ಆಪ್
ರಾಜಕೀಯ

300 ಯೂನಿಟ್ ಉಚಿತ ವಿದ್ಯುತ್, 2 ಲಕ್ಷ ಉದ್ಯೋಗ ಸೃಷ್ಟಿ ; ಪ್ರಣಾಳಿಕೆ ಬಿಡುಗಡೆ ಮಾಡಿದ ಆಪ್

March 30, 2023
ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಣಕ್ಕೆ;   ಸುಳಿವು ನೀಡಿದ ಯಡಿಯೂರಪ್ಪ..!
ರಾಜಕೀಯ

ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಣಕ್ಕೆ; ಸುಳಿವು ನೀಡಿದ ಯಡಿಯೂರಪ್ಪ..!

March 30, 2023
ಹೆಬ್ಬಾಳದಲ್ಲಿ ಗದ್ದುಗೆ ಗುದ್ದಾಟ! ದಿಗ್ಗಜರ ನಡುವಿನ ಗುದ್ದಾಟದಲ್ಲಿ ಯಾರಿಗೆ ಸಿಗುತ್ತೆ ಗದ್ದುಗೆ?
ರಾಜಕೀಯ

ಹೆಬ್ಬಾಳದಲ್ಲಿ ಗದ್ದುಗೆ ಗುದ್ದಾಟ! ದಿಗ್ಗಜರ ನಡುವಿನ ಗುದ್ದಾಟದಲ್ಲಿ ಯಾರಿಗೆ ಸಿಗುತ್ತೆ ಗದ್ದುಗೆ?

March 30, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.