ಹೈದರಾಬಾದ್: ತೆಲುಗಿನ ಖ್ಯಾತ ಧಾರಾವಾಹಿ ನಟಿ ಶ್ರಾವಣಿ ಆತ್ಮಹತ್ಯಗೆ ಶರಣಾಗಿದ್ದು, ಘಟನೆಯಿಂದ ತೆಲುಗು ಕಿರುತೆರೆ ರಂಗ ಬೆಚ್ಚಿಬಿದ್ದಿದೆ.
ಮನಸು ಮಮತಾ, ಮೌನರಾಗಂ ಧಾರಾವಾಹಿ ಮೂಲಕ ಮನೆಮಾತಾಗಿದ್ದ ಶ್ರಾವಣಿ ಅವರು ಎಸ್ ಆರ್ ನಗರದ ತಮ್ಮ ಅಪಾರ್ಟ್ಮೆಂಟ್ನಲ್ಲಿ ನೇಣಿಗೆ ಶರಾಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೀತಿಸುವ ನಾಟಕವಾಡಿದ್ದ ಗೆಳೆಯ ದೇವರಾಜ ರೆಡ್ಡಿ ಎಂಬಾತ ಕೈ ಕೊಟ್ಟಿದ್ದಲ್ಲದೆ ಇಬ್ಬರು ಆತ್ಮೀಯವಾಗಿರುವ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಸಿದ್ದಾನೆ.
ಜೊತೆಗೆ ಈ ಫೋಟೊಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಆಕೆಯಿಂದ ಹಣ ಪೀಕಿದ್ದಾನೆ. ದೇವರಾಜರೆಡ್ಡಿ ಕಿರುಕುಳದಿಂದ ಬೇಸತ್ತಿದ್ದ ಆಕೆ ಪೊಲೀಸರಿಗೆ ದೂರ ನೀಡಿದ್ದಳು. ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ದೇವರಾರೆಡ್ಡಿ ಶ್ರಾವಣಿಗೆ ಟಿಕ್ಟಾಕ್ನಲ್ಲಿ ಪರಿಚಿತನಾಗಿದ್ದ ಎಂದು ತಿಳಿದುಬಂದಿದೆ.