Visit Channel

ಬಾರದ ಲೋಕಕ್ಕೆ ಅಣ್ಣನ ಪಯಣ: ಟಿ.ಎಸ್.ನಾಗಾಭರಣ ಕಂಬನಿ

03-11-2020_somashekar

ಬೆಂಗಳೂರು, ನ. 3: ರಂಗಭೂಮಿಗೆ ವಿಶೇಷ ಕೊಡುಗೆ ನೀಡಿರುವ ನನ್ನ ಪ್ರತೀ ಬೆಳವಣಿಗೆಯಲ್ಲಿ ಬಹುಮುಖ್ಯಪಾತ್ರ ನಿರ್ವಹಿಸಿದ್ದ ಹಿರಿಯಣ್ಣ ರಂಗಕರ್ಮಿ ಹೆಚ್.ಜಿ.ಸೋಮಶೇಖರ ರಾವ್ ಅವರ ನಿಧನ ಅತ್ಯಂತ ದುಃಖವಾಗಿದೆಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ರಂಗಕರ್ಮಿ ಟಿ.ಎಸ್.ನಾಗಾಭರಣ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

1970ರಿಂದ ಸುದೀರ್ಘ 50 ವರ್ಷಗಳಿಂದಲೂ ರಂಗಭೂಮಿ, ಸಿನಿಮಾ ಕಿರುತೆರೆ ಸೇರಿದಂತೆ ಎಲ್ಲದರಲ್ಲೂ ಅವರ ಜೊತೆಗೆ ಹೆಜ್ಜೆ ಹಾಕಿದ್ದೇನೆ. ಎಂತಹ ಕ್ಲಿಷ್ಟ ಸನ್ನಿವೇಶದಲ್ಲೂ ಬೆನ್ನುಲುಬಾಗಿ ನಿಂತು ಬೆಂಬಲ ವ್ಯಕ್ತಪಡಿಸುತ್ತಿದ್ದರು. ನನ್ನ ಬೆಳವಣಿಗೆಯನ್ನು ಹೃಯದಸ್ಪರ್ಶಿಯಾಗಿ ಖುಸಿಪಡುತ್ತಿದ್ದ ನನ್ನ ಅಣ್ಣ ಇಂದು ಬಾರದಲೋಕಕ್ಕೆ ಪಯಣಿಸಿರುವುದು ನನಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅತ್ಯಂತ ನೋವಿನ ವಿದಾಯವನ್ನು ವ್ಯಕ್ತಪಡಿಸಿದ್ದಾರೆ.

ಸಂಗ್ಯಾ-ಬಾಳ್ಯ ನಾಟಕದಲ್ಲಿ ಅವರ ತಮ್ಮನಾಗಿ ನಟನೆ ಮಾಡಿದ್ದು, ನಾವಿಬ್ಬರೂ ಅಣ್ಣ-ತಮ್ಮ ನಟನೆಯ ನಾಟಕ ಹಲವು ಯಶಸ್ವಿ ಪ್ರದರ್ಶನ ಕಂಡಿತ್ತು. ನಿಜ ಜೀವನದಲ್ಲಿಯೂ ನಾವಿಬ್ಬರೂ ಅಣ್ಣತಮ್ಮನಂತೆಯೇ ಬದುಕಿದವರು ಇಂದು ಅವರಿಲ್ಲದ ದಿನಗಳ ಬಗ್ಗೆ ಊಹಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದು ನೋವಿನಿಂದ ಕಂಬನಿ ಮಿಡಿದಿದ್ದಾರೆ.

ನನ್ನ ವೈಯಕ್ತಿಕ ಬದುಕಿರಲೀ, ವೃತ್ತಿಯಲ್ಲಾಗಲೀ ತೊಂದರೆ ಎದುರಾದರೆ ತನ್ನದೇ ಸಮಸ್ಯೆ ಎಂಬಂತೆ ಪರಿಹಾರ ಸೂಚಿಸುವ ಜೊತೆಗೆ ತಾವೇ ಮುಂದೆ ನಿಂತು ಬಗೆಹರಿಸುತ್ತಿದ್ದ (ಅಣ್ಣ ಹೆಚ್.ಜಿ.ಸೋಮಶೇಖರ) ಸೋಮಣ್ಣ ಇನ್ನಿಲ್ಲ ಎಂಬ ಸುದ್ದಿ ಬರಸಿಡಿಲಿನಂತಾಗಿದೆ.

ಪಾಶ್ವಿಮಾತ್ಯ ಮತ್ತು ಭಾರತೀಯ ನಾಟಕಕರ್ತೃಗಳ ಕೃತಿಗಳನ್ನು ರಂಗದ ಮೇಲೆ ಜೀವಂತಗೊಳಿಸಿದ ಸೋಮಶೇಖರ ರಾವ್ ಅವರು 1992-93ನೇ ಸಾಲಿನ ರಾಜ್ಯ ಸರ್ಕಾರದ ಅತ್ಯತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದಿದ್ದರು. ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡೇ ರಂಗಭೂಮಿ, ಸಿನಿಮಾ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಿದವರು ಎಂದು ಶ್ಲಾಘಿಸಿದ್ದಾರೆ.

Latest News

Dakshina Kannada
ರಾಜ್ಯ

ಎಚ್ಚರ! ಅಪಾಯದಲ್ಲಿದೆ ದ.ಕ ಜಿಲ್ಲೆಯ ಬಂಟ್ವಾಳ ಕಿಂಡಿ ಅಣೆಕಟ್ಟು ಸೇತುವೆ

ಕಿಂಡಿ ಅಣೆಕಟ್ಟು ಹಾಗೂ ಸೇತುವೆಯ ಕಾಮಗಾರಿಯ ಕರ್ಮಕಾಂಡ. ಕಾಮಗಾರಿ ಪೂರ್ಣ ಆಗುವ ಮೊದಲೇ ತಡೆಗೋಡೆಯ ಕಾಮಗಾರಿಯ ಅಡಿಪಾಯನೇ ಕಿತ್ತು ಹೊರಗೆ ಬಂದಿದೆ!

BJP
ರಾಜಕೀಯ

ಬಿಜೆಪಿ ನಾಯಕರು ನಮಗೆ ದೇಶಪ್ರೇಮದ ಪಾಠ ಮಾಡುವುದು ಆತ್ಮವಂಚನೆಯಾಗುತ್ತದೆ : ಸಿದ್ದರಾಮಯ್ಯ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಕರಾವಳಿಯಲ್ಲಿ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು(Praveen Nettaru) ಮನೆಗೆ ಮಾತ್ರ ಹೋಗಿ ಪರಿಹಾರ ಕೊಟ್ಟಿದ್ದಾರೆ.

Malyalam
ಮನರಂಜನೆ

ನಟನೆಯಲ್ಲಿ ಸೋಲನ್ನು ಕಂಡರೂ ಕುಗ್ಗದೆ, ಇಂದು ಭಾರತ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ನಟ ಫಹಾದ್ ಫಾಸಿಲ್!

ಫಹಾದ್ ಸಿನಿಮಾಗಳು ತಕ್ಕಮಟ್ಟಿಗೆ ಹಿಟ್ ಎನಿಸಿದರೂ, ಇವರ ಈಗಿನ ಸಿನಿಮಾ ಪ್ರಸಿದ್ಧಿಗೆ ಹೋಲಿಸಿದರೆ ಹಿಂದಿನ ಸಿನಿಮಾಗಳು ಏನೇನೂ ಆಗಿರಲಿಲ್ಲ.

Kabbadi Player
ದೇಶ-ವಿದೇಶ

ಪಲ್ಟಿ ಹೊಡೆಯುವ ಯತ್ನದಲ್ಲಿ ಕುಸಿದು ಬಿದ್ದು ಕಬಡ್ಡಿ ಆಟಗಾರ ಸಾವು! ; ವೀಡಿಯೋ ವೈರಲ್

ಕಬಡ್ಡಿ(Kabbadi) ಆಟಗಾರರೊಬ್ಬ ಸೋಮರ್ ಸಾಲ್ಟ್ ಹೊಡೆಯುತ್ತಿದ್ದಾಗ ಕುಸಿದು ಬಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ(Hospital) ಮೃತಪಟ್ಟಿದ್ದಾರೆ.