
ಕೇಂದ್ರ ಸರ್ಕಾರ ಚೀನಾದ 59 ಅಪ್ಲಿಕೇಶನ್‍ಗಳನ್ನು ನಿಷೇಧ ಮಾಡಿದ ಬಳಿಕ. ಸರ್ಕಾರಿ ಟೆಲಿಕಾಂ ವಾಹಕ ಬಿಎಸ್‍ಎನ್‍ಎಲ್ ತನ್ನ ಅಪ್‍ಗ್ರೇಟ್ ಟೆಂಡರ್‍ಅನ್ನು ರದ್ದು ಮಾಡಿದೆ.
ಚೀನಾದ ಕಂಪನಿಗಳಿಗೆ ಟೆಂಡರ್‍ಗಳಿಂದ ವಿನಾಯಿತಿ ನೀಡಿದ್ದು, ದೂರಸಂರ್ಪಕ ಇಲಾಖೆ(ಡಿಒಟಿ)ಕೆಲವು ವಾರಗಳ ಹಿಂದೆ ಈ ಕ್ರಮವನ್ನು ಶಿಫಾರಸ್ಸು ಮಾಡಿದೆ. ಜತೆಗೆ 7000-8000 ಕೋಟಿ ರು.ವೆಚ್ಚದ ಹೊಸ ಟೆಂಡರ್ ನಿಯಮಗಳನ್ನು ಸರ್ಕಾರ ನಿರ್ಧರಿಸಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇನ್ನು ಚೀನಾದ ಕಂಪನಿಗಳನ್ನು ಬಿಎಸ್‍ಎನ್‍ಎಲ್‍ನ 4ಜಿ ನೆಟ್‍ವರ್ಕ್ ಅಪ್‍ಗ್ರೇಡ್ ಟೆಂಡರ್‍ನಿಂದ ಡಿಒಟಿ ನಿರ್ಧಸಿದೆ. ಟೆಲಿಕಾಂ ಕಂಪನಿಗಳು ಚೀನಾ ತಯಾರಿಸಿದ ಸಾಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರೋತ್ಸಾಹಿಸುವ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಜತೆಗ ಬಿಎಸ್‍ಎನ್‍ಎಲ್ ಮತ್ತು ಎಂಟಿಎನ್‍ಎಲ್ ಚೀನಾ ಕಂಪನಿಗಳಿಂದ ಉಪಕರಣಗಳನ್ನು ಖರೀದಿಸುವುದನ್ನು ನಿರ್ಬಂಧಿಸಿವೆ ಎಂದು ಡಿಒಟಿ ಪ್ರಧಾನ ಮಂತ್ರಿ ಕಚೇರಿ ಮತ್ತು ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಲಾಗಿದೆ.ಇನ್ನು ಕರೋನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಭಾರತ ತನ್ನ 5ಜಿ ಹರಾಜು ಪ್ರಕ್ರಿಯೆಯನ್ನು ಮುಂದಿನ ವರ್ಷಕ್ಕೆ ಮುಂದೂಡಿದೆ.