ಬಿಜೆಪಿ ನಾಯಕನ ಎಡವಟ್ಟು: ಕಾಂಗ್ರೆಸ್‌ ಟೀಕೆ

ಭೋಪಾಲ್, ನ. 1: ಕರ್ನಾಟಕದಂತೆಯೇ ಮಧ್ಯ ಪ್ರದೇಶದಲ್ಲಿ ಕೂಡ ಈಗಾಗಲೇ ಉಪ ಚುನಾವಣೆಯ ಅಬ್ಬರ ಜೋರಾಗಿದ್ದು, ನವೆಂಬರ್ 3ರಂದು ನಡೆಯುವ ಉಪ ಚುನಾವಣೆಯ ಕೊನೆಯ ಹಂತದ ಪ್ರಚಾರದ ವೇಳೆ ಬಿಜೆಪಿ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಎಡವಟ್ಟು ಮಾಡಿಕೊಂಡಿದ್ದಾರೆ. ಬಿಜೆಪಿಯನ್ನು ಟೀಕಿಸಲು ಕಾಂಗ್ರೆಸ್‌ಗೆ ಅಷ್ಟೇ ಸಾಕಾಗಿತ್ತು.

ಗ್ವಾಲಿಯರ್ ನ ದಬ್ರಾ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಇಮರ್ತಿ ದೇವಿಯವರ ಪರ ಪ್ರಚಾರ ನಡೆಸುತ್ತಿದ್ದ ಸಿಂಧಿಯಾ ಭಾಷಣದ ಕೊನೆಗೆ ಜನರಲ್ಲಿ ನವೆಂಬರ್ 3ರ ಉಪ ಚುನಾವಣಾ ದಿನದಂದು ನಿಮ್ಮ ಮತವನ್ನು ಕೈಗೆ ಒತ್ತಿ ಎಂದು ಕೇಳಿಕೊಂಡರು.

ಈ ವಿಡಿಯೊವನ್ನು ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಸಿಂಧಿಯಾರವರೇ, ಮಧ್ಯ ಪ್ರದೇಶದ ಜನರು ನವೆಂಬರ್ 3 ರಂದು ಕೈಯ ಗುರುತಿಗೆ ಮತ ಹಾಕುತ್ತಾರೆ ಎಂದು ನಿಮಗೆ ಖಂಡಿತಾ ಭರವಸೆ ಕೊಡುತ್ತಾರೆ ಎಂದು ಟೀಕಿಸಿದ್ದಾರೆ.

Latest News

ದೇಶ-ವಿದೇಶ

8ನೇ ಬಾರಿಗೆ ಸಿಎಂ ಆಗಿ ನಿತೀಶ್ ಕುಮಾರ್ ; `ಜನಾದೇಶಕ್ಕೆ ದ್ರೋಹʼ : ಬಿಜೆಪಿ

164 ಶಾಸಕರ ಪಟ್ಟಿಯನ್ನು ಸಲ್ಲಿಸಿ, ಬಿಹಾರದಲ್ಲಿ ಹೊಸ ಸರ್ಕಾರ ರಚಿಸಲು ಏಳು ಪಕ್ಷಗಳ ಬೆಂಬಲವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ನಿತೀಶ್ ಕುಮಾರ್ ಇಂದು ಎಂಟನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ದೇಶ-ವಿದೇಶ

ನಾವು ಹೇಳುವ ಯೋಜನೆಯನ್ನು ಅಧಿಕಾರಿಗಳು “ಹೌದು ಸರ್” ಎಂದು ಹೇಳಿ ಕಾರ್ಯರೂಪಕ್ಕೆ ತರಬೇಕು: ನಿತಿನ್ ಗಡ್ಕರಿ!

‘ಹೌದು ಸಾರ್’ ಎಂದು ಹೇಳುವ ಮೂಲಕ ಅಧಿಕಾರಿಗಳು ನಾವು ಹೇಳುವುದನ್ನು ಅನುಸರಿಸಬೇಕು. ಅಧಿಕಾರಿಗಳ ಹಿತದಿಂದ ಸರ್ಕಾರ ನಡೆಯುತ್ತಿಲ್ಲ.