ರಾಜಧಾನಿ ಬೆಂಗಳೂರು ಸಮಸ್ಯೆಗಳ ಆಗರವಾಗ್ತಿದೆ. ಇಲ್ಲಿ ರಸ್ತೆ ಗುಂಡಿ ಸಮಸ್ಯೆ, ಅಲ್ಲಲ್ಲಿ ಅಗೆದು ಬಿಟ್ಟಿರೋ ಚರಂಡಿಗಳು, ಅರ್ಧಂಬರ್ಧ ಕಾಮಗಾರಿಯಾಗಿರೋ ಫುಟ್ಪಾತ್‌ಗಳು ಜನರಿಗೆ ನಿತ್ಯ ಕಿರಿಕಿರಿ ಕೊಟ್ತಿವೆ. ಅದರ ಜೊತೆಗೆ ಕೇಬಲ್ ಮಾಫಿಯಾದ ಕಾಟ ಜನರ ಪ್ರಾಣಕ್ಕೆ ಕಂಟಕವಾಗ್ತಿದೆ.
ನಗರ ತುಂಬಾ ಬರೀ ಕೇಬಲ್‌ಗಳೇ ನೇತಾಡ್ತಿವೆ. ಫುಟ್ಪಾತ್‌ಗಳಲ್ಲಿ ಜನ ಓಡಾಡೋಕೇ ಭಯಪಡುವಂತಾಗಿದೆ. ಇನ್ನು ರಸ್ತೆ ಬದಿ ಮರಗಳು ಬರೀ ಕೇಬಲ್‌ಗಳಿಂದಲೇ ತುಂಬಿ ಹೋಗಿವೆ. ಈ ಕೇಬಲ್ ಮಾಫಿಯಾಗಳು ಮರಗಳಿಗೆ ಮೊಳೆ ಹೊಡೆದು, ರೆಂಬೆಗಳನ್ನ ಕತ್ತರಿಸಿ ಮರಗಳನ್ನು ಕೂಡ ಸಾಯಿಸಿತ್ತಿದ್ದಾರೆ.
ಈ ಕೇಬಲ್ ಸಮಸ್ಯೆ ಎಷ್ಟು ತೀವ್ರಗೊಂಡಿದೆ ಅಂದ್ರೆ ರಸ್ತೆ ಮೇಲೂ ನೇತಾಡ್ತಿವೆ. ಈ ರೀತಿ ನೇತಾಡೋ ಕೇಬಲ್‌ಗಳು ಎಷ್ಟೋ ಜನರ ಪ್ರಾಣಕ್ಕೂ ಕುತ್ತಾಗಿದೆ. ಅದ್ರಲ್ಲೂ ದ್ವಿಚಕ್ರ ವಾಹನ ಸವಾರರ ಬಲಿಗೆ ಕಾಯುತ್ತಿವೆ ಈ ಕೇಬಲ್‌ಗಳು. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಯಾವ ಕ್ರಮಕ್ಕೂ ಮುಂದಾಗುತ್ತಿಲ್ಲ. ಇದರಿಂದ ಬೇಸತ್ತ ಸಿಟಿಜನ್ ಜರ್ನಲಿಸ್ಟ್ ಸೀತಾ ಅವರು ವರದಿಯೊಂದನ್ನ ಮಾಡಿದ್ದಾರೆ. ಆ ಮೂಲಕ ನಿದ್ದೆಯಲ್ಲಿರೋ ಅಧಿಕಾರಿಗಳನ್ನು ಬಡಿದೆಬ್ಬಿಸುವ ಕೆಲಸ ಮಾಡಿದ್ದಾರೆ.