ತೂಕ ಇಳಿಸಬೇಕೆಂದು ಅಂದುಕೊಳ್ಳುತ್ತೇವೆ. ಆದರೆ ಹಸಿವಾದಾಗ ಏನಾದರೂ ತಿನ್ನುತ್ತಲೇ ಇರುತ್ತೇವೆ ..ಅದರಲ್ಲೂ ಸಿಹಿ ಪದಾರ್ಥಗಳನ್ನು ತಿನ್ನುವುದರಿಂದ ತೂಕ ಇನ್ನಷ್ಟು ಹೆಚ್ಚುವುದು ಅಲ್ಲದೆ ಹೆಚ್ಚಿನ ತೂಕದಿಂದ ಸಕ್ಕರೆ ಕಾಯಿಲೆಗೂ ಇದು ಆಹ್ವಾನ ಕೊಟ್ಟಂತೆಯೇ ಸರಿ.
ಸಿಹಿ ಹೆಚ್ಚಿನವರಿಗೆ ತುಂಬಾ ಇಷ್ಟ ಆದರೆ ತೂಕ ಹೆಚ್ಚಿಸುವುದರಲ್ಲಿ ಇದು ಬಹಳ ಮುಂದು ,ಹಾಗೂ ದೇಹಕ್ಕೆ ಮಾರಕವೆಂದೇ ಹೇಳಬಹುದು. ತೂಕ ಇಳಿಸಬೇಕಿದ್ದವರು ಸಕ್ಕರೆಯಿಂದ ಖಂಡಿತ ದೂರವುಳಿಯುವುದೇ ಒಳ್ಳೆಯದು. ಇದರ ಬದಲು ಬೆಲ್ಲವನ್ನು ಸೇವಿಸಿ. ಬೆಲ್ಲದಲ್ಲಿ ಬೊಜ್ಜುವುಂಟು ಮಾಡುವಂಥಾ ಅಂಶಗಳಿಲ್ಲ. ಇದನ್ನು ಕ್ಯಾಲೋರಿ ಶೂನ್ಯವೆಂದೇ ಹೇಳಬಹುದು. ಹಸಿವಾದಾಗ ಒಂದು ಲೋಟ ನೀರಿನ ಜೊತೆ ಸ್ವಲ್ಪ ಬೆಲ್ಲವನ್ನು ತಿನ್ನಿ ಹಸಿವು ನಿಲ್ಲುವುದು ಹೊಟ್ಟೆಯು ತಂಪಾಗಿರುವುದು, ತೂಕ ಇಳಿಸಲೂ ಇದು ಸಹಕಾರಿಯಾಗುವುದು.
ಸಿಹಿ ತಿನ್ನಬೇಕು ಎನಿಸಿದರೆ ಒಣ ಹಣ್ಣುಗಳನ್ನು ಬಳಸಿದರೆ ಉತ್ತಮ,. ಇದರಲ್ಲಿ ಅನೀಮಿಯಾ ನಿವಾರಣಾ ಶಕ್ತಿಯು ಅಡಕವಾಗಿದ್ದು ಉತ್ತಮ ಆರೋಗ್ಯಕ್ಕೆ ಸಹಾಯಕವಾಗಿದೆ. ಬೆಲ್ಲದ ಜೊತೆಯಲ್ಲಿ ಒಂದಷ್ಟು ಒಣದ್ರಾಕ್ಷಿಗಳು ಅಥವಾ ಒಣ ಖರ್ಜೂರವನ್ನು ಸೇವಿಸಿದರೆ ಇದು ತೂಕ ಇಳಿಸಲು ರಾಮಬಾಣವೆಂದೇ ಹೇಳಬಹುದು. ಹಿಂದಿನ ಕಾಲದಲ್ಲಿ ಬೆಲ್ಲ ನೀರಿಗೆ ವಿಶೇಷ ಮಾನ್ಯತೆ ಇತ್ತು. ಮನೆಗೆ ಅಥಿತಿಗಳು ಬಂದರೂ ಬೆಲ್ಲ ನೀರನ್ನೇ ಮೊದಲು ಕೊಡುವ ರೂಢಿಯಿತ್ತು.
ಒಣ ಹಣ್ಣುಗಳಲ್ಲಿ ಕ್ಯಾಲ್ಸಿಯಂ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ ಹಾಗೂ ಕಬ್ಬಿಣಾಂಶಗಳೂ ಇವೆ. ರಾತ್ರಿ ನೀರಲ್ಲಿ ನೆನೆಸಿಟ್ಟು ಬೆಳಿಗ್ಗೆ ಸೇವಿಸಿದರೆ ಉತ್ತಮ. ಇವು ನೈಸರ್ಗಿಕವಾದ ಸಿಹಿ ಅಂಶಗಳಿಂದ ಕೂಡಿದ್ದು ಸಕ್ಕರೆ ಅಂಶ ಸ್ವಲ್ಪ ಪ್ರಮಾಣದಲ್ಲಿದ್ದು ನಾರಿನಂಶದಿಂದ ಕೂಡಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಹಾಗಂತ ಇದನ್ನು ಯಥೇಷ್ಟವಾಗಿಯೂ ಬಳಸಬಾರದು, ತೂಕ ಇಳಿಸಲು ಯಾವುದೇ ಆಹಾರವೂ ಹಿತ ಮಿತವಾಗಿರಬೇಕು.