ಬಾಲಿವುಡ್ ನ ಎವರ್ ಗ್ರೀನ್ ನಾಯಕಿ ಶ್ರೀದೇವಿಯವರ ಪತಿ ಬೋನಿ ಕಪೂರ್ ಬಗ್ಗೆ ದೊಡ್ಡ ಆರೋಪವೇ ಕೇಳಿಬಂದಿದೆ..ಐದು ತಿಂಗಳ ಹಿಂದೆ ನಡೆದ ಘಟನೆಯೊಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಆಕ್ರೋಶಕ್ಕೂ ಗುರಿಯಾಗಿದೆ.ಯಸ್..ಡಿ ಬಾಸ್ ನಟನೆಯ ಐರಾವತ ಚಿತ್ರದ ನಾಯಕಿ ಊರ್ವಶಿ ರೌಟೇಲಾ ಜೊತೆಗೆ ಬೋನಿ ಕಪೂರ್ ಕಾರ್ಯಕ್ರಮವೊಂದರಲ್ಲಿ ಅಸಭ್ಯವಾಗಿ ವರ್ತಿಸಿದ್ದರು ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದೆ…
ಫೋಟೋಗ್ರಾಫರ್ಸ್ ಹಾಗೂ ವಿಡಿಯೋ ಜರ್ನಲಿಸ್ಟ್ ಗಳಿಗೆ ಇವರಿಬ್ಬರೂ ಒಂದೇ ವೇದಿಕೆಯಲ್ಲಿದ್ದು ಫೋಸ್ ಕೊಡುವ ವೇಳೆ ನಟಿಯ ಹಿಂಭಾಗಕ್ಕೆ ಬೋನಿ ಕಪೂರ್ ಕೈ ಹಾಕಿರುವಂತೆ ವಿಡಿಯೋದಲ್ಲಿ ಕಾಣಿಸುತ್ತಿದೆ..ಆದರೆ 5 ತಿಂಗಳ ಬಳಿಕ ಸೌಂಡ್ ಮಾಡ್ತಿರುವ ಈ ವಿಡಿಯೋ ಬಗ್ಗೆ ಖುದ್ದು ಊರ್ವಶಿ ಮಾತನಾಡಿದ್ದು, ಬೋನಿ ಒಬ್ಬ ಜಂಟನ್ ಮ್ಯಾನ್. ಅವರ ಉದ್ದೇಶ ಹಾಗೇನೂ ಇರಲಿಲ್ಲ ಎಂಬುದಾಗಿ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.
ಈ ವಿಡಿಯೋ ಬಗ್ಗೆ ಬೋನಿ ಕಪೂರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ತೀವ್ರವಾಗಿ ಬೇಸರಗೊಂಡಿದ್ದಾರೆ ಎಂಬುದಾಗಿ ಬೋನಿ ಆಪ್ತರು ಮಾಹಿತಿ ನೀಡಿದ್ದಾರೆ.