ನವದೆಹಲಿ, ಅ. 30: ದೇಶದ ಭದ್ರತಾ ಹಿತ ದೃಷ್ಟಿಯಿಂದ ಈಗಾಗಲೇ ಭಾರತ 118 ಆ್ಯಪ್ಗಳನ್ನು ಬ್ಯಾನ್ ಮಾಡಿದೆ. ಅದರಲ್ಲಿ ಒಂದಾಗಿರುವ ಪಬ್ಜಿ ಇಂದಿನಿಂದ ಸಂಪೂರ್ಣ ಕಾರ್ಯ ನಿರ್ವಹಣೆ ಬಂದ್ ಮಾಡಿದೆ ಎಂದು ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಪಬ್ ಜಿ ಆಡಳಿತ ಮಂಡಳಿ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಅಕ್ಟೋಬರ್ 30ರಿಂದ ಭಾರತದಲ್ಲಿ ತನ್ನ ಸೇವೆ ನಿಲ್ಲಿಸಿದ್ದೇವೆ ಎಂದು ತಿಳಿಸಿದೆ.
ಪಬ್ ಜಿ ಮೊಬೈಲ್ ಗೇಮಿಂಗ್ ಆ್ಯಪ್ ಯುವ ಸಮುದಾಯದ ಅತ್ಯಂತ ಜನಪ್ರಿಯವಾಗಿದ್ದು, ಅನೇಕ ಯುವಕರು ಗೇಮ್ಗೆ ಅಡಿಕ್ಟ್ ಆಗಿದ್ದರು. ಇದರ ವಿಸ್ತ್ರತ ರೂಪ Players Unknown Battleground. ಈ ಆಟವನ್ನು ಆರಂಭಿಸಿದ್ದು ದಕ್ಷಿಣ ಕೊರಿಯಾ. 2017ರ ಡಿಸೆಂಬರ್ 20ರಂದು ಇದನ್ನು ಕೊರಿಯಾದ ಪಬ್ಜಿ ಕಾರ್ಪೋರೇಷನ್ ಆರಂಭಿಸಿತ್ತು.
ನಂತರ ಇದಕ್ಕೆ ಇನ್ನಷ್ಟು ರೂಪ ತುಂಬಿ, ಮಕ್ಕಳೂ ಇದರಲ್ಲಿ ಅಡಿಕ್ಟ್ ಆಗುವಂತೆ ಹಾಗೂ ಅತ್ಯಂತ ಭಯಾನಕ ಎನ್ನುವಂಥ ಟಾಸ್ಕ್ ಕೊಟ್ಟು ಮಕ್ಕಳ ಮನಸ್ಸನ್ನೇ ಪರಿವರ್ತನೆ ಮಾಡಿ ಅವರ ಜೀವವನ್ನೂ ತೆಗೆಯುವ ಮಟ್ಟಿನ ಸಾಫ್ಟ್ವೇರ್ ಅಭಿವೃದ್ಧಿ ಮಾಡಿದ್ದು ಚೀನಾ ಮೂಲಕ ಟೆನ್ಸೆಂಟ್ ಎಂಬ ಕಂಪೆನಿ. ಈ ಆಟವಾಡಿ ಇದಾಗಲೇ ಹಲವಾರು ಮಕ್ಕಳು, ಯುವಕರು ಪ್ರಾಣ ಕಳೆದುಕೊಂಡಿದ್ದಾರೆ.
ಕೇಂದ್ರ ಸರಕಾರ ಚೀನಾದ 114 ಮೊಬೈಲ್ ಅಪ್ಲಿಕೇಶನ್ ನಿಷೇಧಿಸಿ ಸುಮಾರು 2 ತಿಂಗಳ ನಂತರ ಪಬ್ ಬಿ ಭಾರತದಲ್ಲಿ ಅಧಿಕೃತವಾಗಿ ತನ್ನ ಆಟ ನಿಲ್ಲಿಸಿದೆ.
ಅಕ್ರಮವಾಗಿ ಗ್ರಾಹಕರ ಮಾಹಿತಿ ಸಂಗ್ರಹ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕಳೆದ ಸೆಪ್ಟೆಂಬರ್ ನಲ್ಲಿ 114 ಮೊಬೈಲ್ ಗಳನ್ನು ನಿಷೇಧಿಸಿತ್ತು. ಈ ಹಿನ್ನೆಲೆಯಲ್ಲಿ ಪಬ್ ಜಿ ಮೊಬೈಲ್ ಮತ್ತು ಪಬ್ ಜಿ ಲೈಟ್ ಅಪ್ಲಿಕೇಶನ್ ಗಳನ್ನು ಗೂಗಲ್ ಪ್ಲೆ ಮತ್ತು ಆಯಪಲ್ ಆಪ್ ನಿಂದ ತೆಗೆದು ಹಾಕಲಾಗಿದೆ.