ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಭಾರತ ಸಂಕಷ್ಟಕ್ಕೆ ಸಿಲುಕಿದೆ. ಪ್ರತಿದಿನ ದಾಖಲೆಯ ಮಟ್ಟದಲ್ಲಿ ಕರೋನಾ ಸೋಂಕಿತರ ಪ್ರಕರಣಗಳು ಪತ್ತೆಯಾಗುತ್ತಿವೆ.
ಕಳೆದ 24 ಗಂಟೆಯಲ್ಲಿ ಅತಿ ಹೆಚ್ಚು ಅಂದರೆ 16,922 ಮಂದಿಗೆ ಕರೋನ ವೈರೆಸ್ ಸೋಂಕು ದೃಢಪಟ್ಟಿದೆ. ಜತೆಗೆ ಒಂದೆ ದಿನ ದೇಶದಲ್ಲಿ ಕರೋನಾ ಮಹಾಮಾರಿಗೆ 418 ಜನ ಬಲಿಯಾಗಿದ್ದಾರೆ. ಇನ್ನು ಕೇಂದ್ರ ಆರೋಗ್ಯ ಮ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿರುವ ಒಂಟ್ಟು ಸೋಂಕಿತರು ಮತ್ತು ಮೃತಪಟ್ಟವರ ಸಂಖ್ಯಗಳ ಮಾಹಿತಿ ಆತಂಕವನ್ನು ಮೂಡಿಸಿದೆ. ಒಟ್ಟು ದೇಶದಲ್ಲಿ 4,73,105 ಮಂದಿಗೆ ಸೋಂಕು ತಗುಲಿದೆ. ಭಾರತ ದೇಶದಲ್ಲಿ ಒಂದೇ ದಿನದಲ್ಲಿ 16,933 ಜನಕ್ಕೆ ಕರೋನಾ ವೈರೆಸ್ ಪಾಸಿಟಿವ್ ಕೇಸ್ ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 4,73,105ಕ್ಕೆ ಏರಿಕೆ ಯಾಗಿದೆ. ಇದುವರೆಗೆ ಕರೋನಾ ಸೋಂಕಿನಿಂದ 14,894 ಮಂದಿ ಬಲಿಯಾಗಿದ್ದಾರೆ. 2,71,697 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ. 1,86,514 ಮಂದಿ ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.
ಕೋವಿಡ್-19 ಸೋಂಕು ಪತ್ತೆಗಾಗಿ ರಕ್ತ ಮ್ತು ಗಂಟಲು ದ್ರವ್ಯದ ಮಾದರಿಯ ತಪಾಸಣೆ ನಡೆಸಲಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಐಸಿಎಂಆರ್‍ನಲ್ಲಿ 2,07,87 ಜನರ ತಪಾಸಣೆ ಮಾಡಲಾಗಿದೆ.ಸದ್ಯ ನಿನ್ನೆ (ಜೂ.24) ವರೆಗೆ ದೇಶದಲ್ಲಿ ಬರೋಬ್ಬರಿ 75,60782 ಜನರ ರಕ್ತ ಮತ್ತು ಗಂಟಲು ದ್ರವ್ಯವದ ತಪಾಸಣೆ ನಡೆಸಲಾಗಿದೆ.
ಕರ್ನಾಟಕದಲ್ಲೂ ಕೂಡ ಪ್ರತಿದಿನ ಕರೋನಾ ವೈರೆಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10,118 ಗಡಿ ದಾಟಿದೆ.