ಇಸ್ಲಾಮಾಬಾದ್,ಸೆ.10: ಇಸ್ರೋದ ಚಂದ್ರಯಾನ-2 ಪ್ರಯತ್ನದ ಬಗ್ಗೆ ಪಾಕಿಸ್ತಾನದ ಪ್ರಪ್ರಥಮ ಮಹಿಳಾ ಗಗನಯಾತ್ರಿ ನಾಮಿರಾ ಸಲೀಂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಚಂದ್ರಯಾನ-2 ವನ್ನು ಐತಿಹಾಸಿಕ ಸಾಧನೆ ಎಂದು ಹೊಗಳಿರುವ ಅವರು ದಕ್ಷಿಣ ಏಷ್ಯಾದ ಮಟ್ಟಿಗಿದು ದೈತ್ಯ ಸಾಧನೆ. ಭಾರತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಅಂದಿದ್ದಾರೆ. ಅಲ್ಲದೆ ಬಾಹ್ಯಾಕಾಶದಲ್ಲಿ ಮಾತ್ರ ಗಡಿಗಳನ್ನೂ ಮೀರಿ ನಮ್ಮೆಲ್ಲರನ್ನೂ ಒಂದಾಗಿಸುವ ಶಕ್ತಿ ಇದೆ ಎಂಬುದಾಗಿಯೂ ತಿಳಿಸಿದ್ದಾರೆ..
ನಾಮಿರಾ ಸಲೀಂರವರ ಹೇಳಿಕೆ ಪಾಕಿಸ್ತಾನಿಗರನ್ನು ಕೆರಳಿಸಿದೆ. ಶತ್ರು ರಾಷ್ಟ್ರವನ್ನು ಹೊಗಳಿದ ಅವರ ಬಗ್ಗೆ ನಿಂದಿಸುತ್ತಿದಾರೆ. ಆದರೆ ಇದ್ಯಾವುದನ್ನೂ ಲೆಕ್ಕಿಸದ ಸಲೀಂ ಈ ನನ್ನ ಹೇಳಿಕೆಯ ಪರವಾಗಿ ನಿಂತ ಪಾಕಿಸ್ತಾನಿಗರು ಹಾಗೂ ಭಾರತೀಯ ಮಾಧ್ಯಮ ಹಾಗೂ ಜನರಿಗೆ ನನ್ನ ಧನ್ಯವಾದಗಳು ಎಂದಿದ್ದಾರೆ.