ಭಾರತ ಚೀನಾ ಹಾಗು ನೇಪಾಳದ ನಡುವೆ ಹಲವು ದಿನಗಳಿಂದ ಸಂಘರ್ಷ ನಡೆಯುತ್ತಲೇ ಇತ್ತು. ಆದರೆ ಮಂಗಳವಾರ ಅದು ತೀವ್ರ ಸ್ಥಿತಿಗೆ ಬಂದಿದೆ. ಗಲ್ವಾನ್ ಕಣಿವೆಗೆ ಸಂಬಂಧಿಸಿದಂತೆ ಇಂದು ಭಾರತ ಹಾಗು ಚೀನಾದ ನಡುವೆ ಭಾರಿ ಪ್ರಮಾಣದ ಸಂಘರ್ಷ ನಡೆದಿದೆ.
ಭಾರತದವರು ಗಡಿ ದಾಟಿ ಬಂದ್ದಿದ್ದರಿಂದ ದಾಳಿ ಮಾಡಿರುವುದಾಗಿ ಚೀನಾ ಹೇಳಿಕೆ ನೀಡಿದೆ. ಆದರೆ ಭಾರತದ ಯಾವುದೇ ಯೋಧ ಗಡಿ ದಾಟ್ಟಲ್ಲ ಎಂದು ಭಾರತ ಸೇನೆ ಸ್ಪಷ್ಟ ಪಡಿಸಿದೆ. ಸಂಘರ್ಷದಲ್ಲಿ ಐವರು ಚೀನಾ ಯೋಧರು ಮೃತಪಟ್ಟಿದ್ದೂ 11 ಜನರಿಗೆ ಗಾಯಗಳಾಗಿವೆ. ಆದರೆ ಈ ಬಗ್ಗೆ ಚೀನಾ ಇನ್ನು ಯಾವುದೇ ಮಾಹಿತಿ ನೀಡಲ್ಲ.
ಇಷ್ಟು ದಿನ ಗಡಿಯಲ್ಲಿ ಶಾಂತಿಯನ್ನು ಕಾಪಾಡಿಕೊಂಡು ಬರುತ್ತಿದ ಭಾರತೀಯ ಸೇನೆ ಇಂದು ಯುದ್ಧಕ್ಕೆ ಬಂದ ಚೀನಾಕ್ಕೆ ತಕ್ಕ ಪಾಠ ಕಲಿಸಿದೆ. ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳುವಂತೆ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಮನವಿ ಮಾಡಿದ್ದಾರೆ.