ಮಂಗಳೂರು, ನ. 16: ಕೋವಿಡ್-19 ಲಾಕ್ ಡೌನ್ ಕಾರಣದಿಂದ ಸ್ಥಗಿತವಾಗಿದ್ದ ಮಂಗಳೂರು- ಕಾಸರಗೋಡು ನಡುವಣ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸೋಮವಾರ ಬೆಳಗ್ಗಿನಿಂದ ಆರಂಭವಾಗಿದೆ.
ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಎಂಟು ತಿಂಗಳಿನಿಂದ ಉಭಯ ಜಿಲ್ಲೆಗಳ ನಡುವಣ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಎರಡೂ ಜಿಲ್ಲೆಗಳ ಕೆಎಸ್‌ಆರ್ ಟಿಸಿ ನಿರ್ಧಾರದ ಕಾರಣದಿಂದಾಗಿ ಬಸ್ ಕಾರ್ಯಾಚರಣೆ ಆರಂಭಗೊಂಡಿದೆ.
ಮೊದಲ ಹಂತದಲ್ಲಿ ಮಂಗಳೂರಿನಿಂದ ಮತ್ತು ಕಾಸರಗೋಡು ಎಸ್‌ಆರ್ ಟಿಸಿ ಡಿಪೋದಿಂದ ತಲಾ 10 ಬಸ್ ಗಳು ಕಾರ್ಯಾಚರಣೆ ಆರಂಭಿಸಿದೆ. ಪ್ರಯಾಣಿಕರ ಅಗತ್ಯತೆಗಳ ಅನುಗಣವಾಗಿ ಬಸ್ ಸಂಖ್ಯೆ ಹೆಚ್ಚಳ ಮಾಡಲಾಗುವುದು ಎಂದು ಕೆಎಸ್‌ಆರ್ ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.