ಮಂಗಳೂರು: ಸೆಪ್ಟೆಂಬರ್ 23 ರಿಂದ ಮಂಗಳೂರು ಬೆಂಗಳೂರು ವಿಮಾನ ಯಾನ ಮತ್ತೆ ಪ್ರಾರಂಭವಾಗುತ್ತದೆ. ಕೊರೋನಾ ಸಾಂಕ್ರಾಮಿಕ ಹರಡದಂತೆ ಲಾಕ್ ಡೌನ್ ವಿಧಿಸಿದ್ದರಿಂದ ದೇಶ ವಿದೇಶಗಳ ವಿಮಾನ ಯಾನವನ್ನು ರದ್ದುಗೊಳಿಸಿತ್ತು.
ಸೆ 22 ರಿಂದ ಮಂಗಳೂರಿನಿಂದ ದೆಹಲಿಗೆ ಮತ್ತೆ ವಿಮಾನ ಯಾನ ಆರಂಭಿಸಿರುವುದಾಗಿ ಸ್ಪೈಸ್ ಜೆಟ್ ವಿಮಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಇದರ ಜೊತೆಗೆ ಸೆ 23 ರಿಂದ ಬೆಂಗಳೂರು ನಡುವೆ ಕೂಡ ವಿಮಾನಯಾನ ಆರಂಭವಾಗುತಿದೆ.
ಸ್ಪೈಸ್ ಜೆಟ್ ವಿಮಾನ ಪ್ರಕಟಣೆಯಂತೆ ದೆಹಲಿಯಿಂದ 101.10 ಕ್ಕೆ ಹೊರಟ ವಿಮಾನ 12.35ಕ್ಕೆ ಬಜ್ಪೆ ವಿಮಾನ ನಿಲ್ದಾಣಕ್ಕೆ ತಲುಪಿದೆ. ಇನ್ನು 1.30 ಕ್ಕೆ ಹೊರಟ ವಿಮಾನ ದೆಹಲಿಯನ್ನು 3.55ಕ್ಕೆ ತಲುಪಲಿದೆ. ಸದ್ಯಕ್ಕೆ ಮಂಗಳವಾರ ಹಾಗೂ ಭಾನುವಾರ ಮಾತ್ರ ದೆಹಲಿಗೆ ವಿಮಾನ ಸೇವೆ ಲಭ್ಯವಿದೆ.
ಮಂಗಳೂರು ಬೆಂಗಳೂರು ನಡುವೆ ಬುಧವಾರ ( ಸೆ.23 ) ರಿಂದ ಆರಂಭವಾಗಿದೆ. ಎರಡೂ ನಗರಗಳ ನಡುವೆ ಪ್ರತೀ ಬುಧವಾರ ಹಾಗೂ ಗುರುವಾರ ಮಾತ್ರ ವಿಮಾನ ಯಾನ ಸಾದ್ಯವಿದೆ ಎಂದು ಜೆಟ್ ಸಂಸ್ಥೆ ತಿಳಿಸಿದೆ.
ಬೆಂಗಳೂರಿನ ದೇವನ ಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 9.45ಕ್ಕೆ ಹೊರಟು 10.30ಕ್ಕೆ ಮಂಗಳೂರನ್ನು ತಲುಪಲಿದೆ. ಮಂಗಳೂರಿನಿಂದ 11ಕ್ಕೆ ಹೊರಟು 11.55ಕ್ಕೆ ಬೆಂಗಳೂರನ್ನು ತಲುಪಲಿದೆ ಎಂದು ಸ್ಫಸ್ ಜೆಟ್ ತಿಳಿಸಿದೆ.