ಸ್ಯಾಂಡಲ್ ವುಡ್ ನಲ್ಲಿ ರೀಲ್ ಹಾಗೂ ರಿಯಲ್ ಲೈಫ್ ಹಿಟ್ ಜೋಡಿಯೆಂದೇ ಹೆಸರು ಮಾಡಿರುವ ರಾಕಿಂಕ್ ಸ್ಟಾಕ್ ಯಶ್ ಹಾಗೂ ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್ ಗೆ ಈ ಬಾರಿಯ ಮಕ್ಕಳ ದಿನಾಚರಣೆ ಬಹಳ ಸ್ಪೆಷಲ್ ಆಗಿದೆ..ಇಬ್ಬರು ಮಕ್ಕಳೊಂದಿಗೆ ವಿಶೇಷವಾಗಿ ಮಕ್ಕಳ ದಿನಾಚರಣೆ ಆಚರಿಸಿಕೊಂಡಿದ್ದಾರೆ ಈ ತಾರಾ ಜೋಡಿ..ಯಸ್..ಸದ್ಯಕ್ಕೆ ಚಿತ್ರರಂಗದಿಂದ ಕೊಂಚ ದೂರ ಉಳಿದರೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಮಕ್ಕಳ ದಿನಾಚರಣೆಯ ಶುಭಾಷಯಗಳನ್ನು ಕೋರಿದ್ದಾರೆ..

ಅದಕ್ಕೂ ಮಿಗಿಲಾಗಿ ಮಗಳು ಐರಾ ಜೊತೆಗೆ ಪತಿ ಯಶ್ ಮುದ್ದಾಗಿ ಆಟವಾಡುತ್ತಿರುವ ಫೊಟೋವೊಂದನ್ನು ಹಂಚಿಕೊಂಡಿದ್ದಾರೆ..ಬಿಡುವಿನ ವೇಳೆಯಲ್ಲೆಲ್ಲಾ ತಾನೂ ಮಗುವಾಗಿ ಮಗಳ ಜೊತೆ ಕಾಲ ಕಳೆಯುವ ಯಶ್ ರವರ ಈ ಫೊಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.