Visit Channel

ಮಗಳಿಗಾಗಿ ಮಾಲ್ ಸುತ್ತಿದ ಯಶ್-ರಾಧಿಕಾ ಜೋಡಿ

dp-yash-radhika-1568784020

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಜೋಡಿ..ಸಿನಿಮಾ…ಮದ್ವೆ..ಮೊದಲ ಮಗು ಹೀಗೆ ಬ್ಯುಸಿ ಶೆಡ್ಯೂಲ್ ಗಳ ನಡುವೆ ಈ ಜೋಡಿ ಶಾಪಿಂಗ್ ಮಾಡೋದಕ್ಕೆ ಹೋಗದೆ ಬಹು ಕಾಲವಾಗಿತ್ತಂತೆ..ಈ ಕಾರಣಕ್ಕಾಗಿಯೇ ಯಶ್ ಆಂಡ್ ರಾಧಿಕಾ ಸದ್ಯ ಮಗಳಿಗಾಗಿ ಶಾಪಿಂಗ್ ಮಾಡೋದಕ್ಕೆ ಮಾಲ್‍ಗೆ ತೆರಳಿದ್ದರು. ಆಯಿರಾಗೆ 1 ವರ್ಷವಾಗುತ್ತಾ ಬಂದಿದ್ದು, ಮಗಳಿಗಾಗಿ ಸ್ವಲ್ಪ ಟಾಯ್ಸ್ ಕೊಂಡುಕೊಳ್ಳೋದಕ್ಕೆ ಮಾಲ್ ನ ಮಕ್ಕಳ ಟಾಯ್ಸ್ ಸೆಕ್ಷನ್ ಗೆ ತೆರಳಿದ್ದರು..

“ನಾವು ನಮಗಾಗಿ ಶಾಪಿಂಗ್ ಮಾಡಲು ಹೋಗಿ ವರ್ಷಗಳೇ ಕಳೆದಿವೆ. ಆದ್ರೀಗ ಆಯಿರಾಗಾಗಿ ಆಟಿಕೆಕೊಂಡುಕೊಳ್ಳಲು ಮಾಲ್ ಗೆ ಬಂದಿದ್ದೀವಿ. ಜೀವನ ಹೇಗೆ ಬದಲಾಗುತ್ತೆ. ನಾವು ಆಟಿಕೆ ಶಾಪ್ ನಲ್ಲಿ ಎಂಜಾಯ್ ಮಾಡಿದೆವು. ಅವರು ನಮಗೆ ಮನರಂಜನೆ ನೀಡಿದರು” ಎಂದು ಬರೆದುಕೊಂಡಿದ್ದಾರೆ. ಯಶ್ ಮತ್ತು ರಾಧಿಕಾ ಇಬ್ಬರು ಆಟಿಕೆಯನ್ನು ಆಯ್ಕೆ ಮಾಡುತ್ತಿರುವ ಫೋಟೋವನ್ನು ಅಪ್ ಲೋಡ್ ಮಾಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಹರಿದುಬಂದಿದೆ. ರಾಧಿಕಾ ದಂಪತಿ ಸದ್ಯ ಎರಡನೆ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.

Latest News

bsy
ರಾಜಕೀಯ

ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್‌ವೈ

ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.

bjp
ರಾಜಕೀಯ

ಡಿಕೆಶಿ ಸ್ವಾತಂತ್ರ್ಯದ ನಡಿಗೆಯ ಉದ್ದೇಶ, ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ? : ಬಿಜೆಪಿ

ಸಿದ್ದರಾಮಯ್ಯ(Siddaramaiah) ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್(Congress) ಹಿರಿಯ ನಾಯಕರು ಡಿಕೆಶಿ(DKS) ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ?

Ghee
ಆರೋಗ್ಯ

ತುಪ್ಪದ ಬಗ್ಗೆ ತಪ್ಪು ಕಲ್ಪನೆ ಬೇಡ! ; ತಪ್ಪದೇ ತುಪ್ಪ ಸೇವಿಸಿ, ಈ ಆರು ಪ್ರಯೋಜನಗಳನ್ನು ಪಡೆದುಕೊಳ್ಳಿ

ತುಪ್ಪವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

Assam
ದೇಶ-ವಿದೇಶ

500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.