ಮಂಗಳವಾರ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಭೂಮಿ ಕಂಪಿಸಿದೆ. ಈ ಮೂಲಕ ಮೂರನೇ ಭಾರಿ ಇಲ್ಲಿ ಭೂಮಿ ಕಂಪಿಸಿದ್ದು ಕೊಂಚ ಮಟ್ಟಿಗೆ ಜನರು ಭಯಭೀತರಾಗಿದ್ದಾರೆ.
ಬೆಳಿಗ್ಗಿನ ಜಾವ ಸುಮಾರು ೭ ಗಂಟೆಗೆ ಭೂಮಿ ಕಂಪಿಸಿದ್ದು ರಿಕ್ಟರ್ ಮಾಪಕದಲ್ಲಿ 5.8ರಷ್ಟು ಕಂಪನದ ತೀವ್ರತೆ ದಾಖಲಾಗಿದೆ.ಇನ್ನು ಭೂಮಿ ಇಷ್ಟರ ಮಟ್ಟಿಗೆ ಕಂಪಿಸಿದ್ರು ಯಾವುದೇ ಹಾನಿಯಾಗಿಲ್ಲ ಅನ್ನೋದು ವರದಿಯಾಗಿದೆ. ಭೂಮಿಯ ಕಂಪನ ತಜಕಿಸ್ಥಾನದಲ್ಲಿ ಕಂಡು ಬಂದಿದ್ದು ಕಾಶ್ಮೀರ ಕಣಿವೆ, ಶ್ರೀನಗರ, ಕಿಶ್ತವಾರ ಮತ್ತು ದೋಡಾ ಜಿಲ್ಲೆಗಳಲ್ಲಿ ಕಂಪನದ ತೀವ್ರತೆ ಹೆಚ್ಚು ಇತ್ತುಎಂದು ಅಧಿಕಾರಿಗಳು ತಿಳಿಸಿದ್ದಾರೆ.
,