ಈಗಂತೂ ಸ್ಯಾಂಡಲ್ ವುಡ್ ನಲ್ಲಿ ಅನೇಕರಿಗೆ ಕಂಕಣ ಭಾಗ್ಯ ಕೂಡಿಬಂದಂತಿದೆ..ಒಂದರ ಹಿಂದೆ ಒಂದರಂತೆ ಮದ್ವೆ ಸಮಾರಂಭಗಳು ನಡೆಯುತ್ತಲೇ ಇದೆ. ಕನ್ನಡದ ಬಹು ಬೇಡಿಕೆಯ ನಟಿ ರಚಿತಾ ರಾಮ್ ಸಹ ಸದ್ಯ ಮದುವೆ ತಯಾರಿಯನ್ನು ಮಾಡಿಕೊಂಡಿದ್ದಾರೆ..ಹೌದು, ರಚಿತಾ ರಾಮ್ ಅವರ ಸಹೋದರಿ ನಿತ್ಯಾ ರಾಮ್ ಡಿಸೆಂಬರ್ 5ರಂದು ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿರುವ ಉದ್ಯಮಿಯೊಬ್ಬರ ಕೈ ಹಿಡಿಯಲಿದ್ದು, ಒಬ್ಬಳೇ ಒಬ್ಬಳು ಸಹೋದರಿಯನ್ನು ಹೊಂದಿರುವ ರಚಿತಾ ರಾಮ್, ಈ ವಿವಾಹಕ್ಕಾಗಿ ಭಾರೀ ತಯಾರಿ ಮಾಡಿಕೊಳ್ತಿದ್ದಾರೆ..ಈಗಾಗ್ಲೇ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿದಿದ್ದು, ವಿವಾಹ ಸಮಾರಂಭ ನಡೆಯೋದೆಲ್ಲಿ.. ? ವರ ಯಾರು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ರಚಿತಾ ರಾಮ್ ಅವರ ಸಹೋದರಿ ನಿತ್ಯಾ ರಾಮ್ ಸಹ ಬೆಂಕಿಯಲ್ಲಿ ಅರಳಿದ ಹೂವು, ರಾಜಕುಮಾರಿ, ಕರ್ಪೂರದ ಗೊಂಬೆ, ಮನೆದೇವರು ಹಾಗೂ ತೆಲುಗಿನಲ್ಲಿ ಎರಡು ಸೀರಿಯಲ್‌ಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇವರು ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನಂದಿನಿ’ ಸೀರಿಯಲ್‌ನಲ್ಲಿ ಮಹತ್ವದ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಈ ಧಾರಾವಾಹಿಯ ಒಂದೇ ಕಥೆ ಏಕಕಾಲಕ್ಕೆ ಕನ್ನಡ, ತಮಿಳು, ತೆಲುಗು, ಮಲೆಯಾಳಂನಲ್ಲಿ ಮೂಡಿಬರುತ್ತಿದೆ. ‘ಮುದ್ದಿನ ಮನಸು’ ಇವರ ಮೊದಲ ಚಿತ್ರ.