ಬೆಂಗಳೂರು, ಅ. 16: ಸೆಪ್ಟೆಂಬರ್ 21 ರಿಂದ 29ರವರೆಗೆ ನಡೆದಿದ್ದ, ಕರ್ನಾಟಕ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯ ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು, ಒಟ್ಟು ಶೇ. 51.28ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ತಿಳಿದು ಬಂದಿದೆ.
65,652 ಬಾಲಕರು ಹಾಗೂ 44,067 ಮಂದಿ ಬಾಲಕಿಯರನ್ನೊಳಗೊಂಡಂತೆ ಸುಮಾರು 1.1 ಲಕ್ಷ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆದಿದ್ದರು. .213955 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 109719 ಮಂದಿ ಉತ್ತೀರ್ಣರಾಗಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶವು, ಆಗಸ್ಟ್ 10ರಂದು ಹೊರಬಿದ್ದಿತ್ತು. .ಸರ್ಕಾರಿ ಶಾಲೆಗಳ ಫಲಿತಾಂಶ ಶೇ. 72.79 ರಷ್ಟಾಗಿದ್ದರೆ, ಅನುದಾನಿತ ಶಾಲೆಗಳ 70.60 ರಷ್ಟಾಗಿತ್ತು. ಒಟ್ಟಾರೆಯಾಗಿ 71.80ರಷ್ಟು ಶೇಕಡಾವಾರು ಫಲಿತಾಂಶ ಲಭಿಸಿಸತ್ತು. ಒಟ್ಟಾರೆಯಾಗಿ 2,28,734 ಅನುತ್ತೀರ್ಣರಾಗಿದ್ದರು ಎಂದು ತಿಳಿದು ಬಂದಿದೆ.
ವಿದ್ಯಾರ್ಥಿಗಳು karresults.nic.in ನಲ್ಲಿ ಫಲಿತಾಂಶ ವೀಕ್ಷಿಸಬಹುದು