ಪುಲ್ವಾಮಾದಲ್ಲಿ ಮೂವರು ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ಪ್ಯಾಂಪೋರ್‍ನ ಮೀಜ್‍ನಲ್ಲಿರುವ ಮಸೀಯಲ್ಲಿ ಇನ್ನಷ್ಟು ಉಗ್ರರು ಅಡಗಿ ಕುಳಿತಿದ್ದು, ಭಾರತೀಯ ಸೇನಾಪಡೆ ಕಾರ್ಯಾಚರಣೆ ಮುಂದುವರೆಸಿದೆ ಎಂದು ವರದಿಗಳಿಂದ ಮಾಹಿತಿ ತಿಳಿದುಬಂದಿದೆ.
ಮನಸೀದಿಯಲ್ಲಿ ಇನ್ನು ಹೆಚ್ಚಿನ ಉಗ್ರರು ಅಡಗಿ ಕುಳಿತಿದ್ದಾರೆ ಎಂಬ ಶಂಕೆ ಇದ್ದು. ಮಸೀದಿ ಸುತ್ತ ಸೇನಾಪಡೆ ಸುತ್ತುವರೆದಿದೆ. ಜೂ.18 ರಂದು ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದು. ಮತ್ತೆ ಇಬ್ಬರು ಉಗ್ರರ ಹತ್ಯೆ ಮಾಡಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜತೆಗೆ 24 ಗಂಟೆಯಲ್ಲಿ 8 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ. ಮಸೀದಿಯಲ್ಲಿ ಇನ್ನಷ್ಟು ಉಗ್ರರು ಇರುವ ಶಂಕೆಯಿರುವುದರಿಂದ ಉಗ್ರರನ್ನು ಮಸೀದಿಯಿಂದ ಹೊರಗೆ ಬರುವಂತೆ ಮಾಡಲು ಟಿಯರ್ ಗ್ಯಾಸ್ ಬಳಕೆ ಮಾಡಲಾಗಿದೆ. ಉಗ್ರರು ಮಸೀದಿಯೊಳಗಿರುವುದರಿಂದ ಐಇಡಿ ಅಥವಾ ಫೈರಿಂಗ್ ಮಾಡುವಂತಿಲ್ಲ ಎಂದು ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.