ಮುಂಬೈ: ಮಹರಾರಾಷ್ಟ್ರದಲ್ಲಿ ಕೊರೋನ ಮಹಾಮಾರಿಯಿಂದ ಪ್ರತಿ ೧೦ ನಿಮಿಷಕ್ಕೊಮ್ಮೆ ಒಬ್ಬ ವ್ಯಕ್ತಿಯು ಮರಣ ಹೊಂದುತ್ತಿದ್ದಾನೆಂದು ವರದಿಯಾಗಿದೆ.
ಮಹಾರಾಷ್ಟ್ರದಲ್ಲಿ ಕಳೆದ ೧೪ ದಿನಗಳದಿಂದ ಪ್ರತಿದಿನ ೭೫ಕ್ಕೂ ಹೆಚ್ಚು ಸಾವು ಹಾಗು ೨೦೦೦ ಕ್ಕೂ ಅಧಿಕ ಪಾಸಿಟಿವ್ ಕೇಸಸ್ ಕಂಡುಬರುತ್ತಿದೆ. ಕೇವಲ ಮಂಗಳವಾರ ಒಂದು ದಿನದಲ್ಲೇ ೧೨೦ ಮಂದಿ ಮರಣ ಹೊಂದಿದ್ದು ೨೨೫೯ ಹೊಸ ಪ್ರಕರಣಗಳು ದಾಖಲಗಿದೆ. ಈ ನಿಟ್ಡಿನಲ್ಲಿ ಸರಾಸಾರಿ ರಾಜ್ಯದಲ್ಲಿ ಪ್ರತಿ ೧೦ನಿಮಿಷಕ್ಕೆ ಸೋಂಕಿನಿಂದ ಒಂದು ಸಾವಾಗುತ್ತಿದ್ದು ಪ್ರತಿ ಗಂಟೆಗೊಮ್ಮೆ ೯೪ ಹೊಸ ಪ್ರಕರಣ ದಾಖಲಗುತ್ತಿದೆಂದು ಮೂಲಗಳು ತಿಳಸಿದೆ. ಈ ವರೆಗು ರಾಷ್ಟ್ರದಲ್ಲಿ ೯೦೭೮೭ ಕೇಸಸ್ ಕಂಡುಬಂದಿದೆ.
ಮಂಗಳವಾರದಂದು ದಾಖಲಾದ ೧೨೦ ಸಾವಿನ ಪೈಕಿ ೫೮ ಪ್ರಕರಣ ಮುಂಬೈಯಲ್ಲೇ ಕಂಡು ಬಂದಿದೆ. ರಾಷ್ಟ್ರದಲ್ಲಿ ೫೬೮೦೭೩ ಮಂದಿ ಕ್ವ್ಯಾರೆಂಟೈನ್ ನಲ್ಲಿದ್ದು, ೩೭೫೦ ಕಂಟೈನ್ಮಂಟ್ ಝೋನ್ ಅಗಿ ಗುರಿತಿಸಿಕೊಂಡಿದೆ.
ಈ ವೇಳೆ ಮಹರಾಷ್ಟ್ರದ ಮುಖ್ಯಮಂತ್ರಿ ಉದ್ದವ್ ತಚ್ಕೇರೆರವರು ಸುಮಾರು ೧.೦೭ ಕೋಟಿ ಬೆಲೆ ಬಾಳುವ ಕೊರೋನ ವೈರಸ್ ಟೆಸ್ಟಿಂಗ್ ಲ್ಯಾಬ್ ಯನ್ನು ರತನ್ ಗಿರಿ ಸಿವಿಲ್ ಅಸ್ಪತ್ರೆಯಲ್ಲಿ ಉದ್ಗಾಟಿಸಿದರು.