ನವದೆಹಲಿ, ಸೆ. 12: ಕೇಂದ್ರ ಕ್ರೀಡಾ ಸಚಿವಾಲಯವು ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ವಿಭೂಷಣಕ್ಕೆ ಮೊದಲ ಬಾರಿಗೆ ಮಹಿಳಾ ಕ್ರೀಡಾಪಟುಗಳನ್ನೇ ಆಯ್ಕೆ ಮಾಡಿದೆ. ವಿಶ್ವ ಬಾಕ್ಸಿಂಗ್ ಚಾಂಪಿಯನ್ ಆಗಿ 6 ಬಾರಿ ಭಾರತಕ್ಕೆ ಹೆಸರು ತಂದುಕೊಟ್ಟ ಮೇರಿ ಕೋಮ್ ಹೆಸರನ್ನು ಸೂಚಿಸಲಾಗಿದೆ. ಪದ್ಮ ಭೂಷಣ ಪುರಸ್ಕಾರಕ್ಕೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಷಿಪ್ ವಿನ್ನರ್ ಪಿ.ವಿ.ಸಿಂಧು ಹೆಸರು ಶಿಪಾರಸ್ಸುಗೊಂಡಿದೆ. ಒಟ್ಟು 9 ಮಹಿಳಾ ಕ್ರೀಡಾಪಟುಗಳ ಹೆಸರನ್ನು ಕೇಂದ್ರ ಗೃಹ ಇಲಾಖೆಗೆ ಶಿಫಾರಸ್ಸು ಮಾಡಲಾಗಿದ್ದು, ಮುಂದಿನ ವರ್ಷ ಗಣರಾಜ್ಯೋತ್ಸವದಂದು ವಿಜೇತರ ಹೆಸರನ್ನು ಪ್ರಕಟಿಸಿ, ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪದ್ಮ ವಿಭೂಷಣ ಪ್ರಶಸ್ತಿಗೆ ಇದೇ ಮೊದಲ ಬಾರಿಗೆ ಮಹಿಳಾ ಕ್ರೀಡಾಳುವಿನ ಹೆಸರು ಅಂದರೆ ಮೇರಿ ಕಾಮ್ ಹೆಸರು ನಿರ್ದೇಶಿಲಾಗಿದ್ದು, ಇವರು 2006ರಲ್ಲಿ ಪದ್ಮಶ್ರೀ ಹಾಗೂ 2013ರಲ್ಲಿ ಪದ್ಮಭೂಷನ ಪ್ರಶಸ್ತಿ ಗಳಿಸಿಸಿದ್ದಾರೆ. ಬ್ಯಾಡ್ಮಿಂಠನ್ ತಾರೆ ಪಿ.ವಿ.ಸಿಂಧುರವರು 2015ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡಿದ್ದರು. 2017ರಲ್ಲಿ ಪದ್ಮಭೂಷಣ ಪ್ರಶಸ್ತಿಯ ಅಂತಿಮ ಆಯ್ಕೆಯಲ್ಲಿು ಹೆಸರು ಗಳಿಸಿಕೊಂಢರೂ ಪ್ರಶಸ್ತಿ ಕೈ ತಪ್ಪಿತ್ತು.