ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಘವ ಪಲ್ಲತ್ತಡ್ಕ ಸೋಮವಾರ ತಡರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ .ರಾಘವ ಗೌಡರವರ ಅಂತ್ಯ ಸಂಸ್ಕಾರ ಇಂದು ಪೂರ್ವಾಹ್ನ ೧೧ ಗಂಟೆಗೆ ಗೌಡ ಸಂಪ್ರದಾಯದಂತೆ ನಡೆದಿದೆ. ಇನ್ನು ನಿವೃತ್ತ ಶಿಕ್ಷಕರಾಗಿರುವ ರಾಘವ ಗೌಡ ಹಾಲು ಹಿಂಡುವ ಯಂತ್ರ ಸಂಶೋಧನೆಯ ಮೂಲಕ ಅಂತರಾಷ್ಟ್ರೀಯ ಮಟ್ಟದವರೆಗೆ ಗುರುತಿಸಿಕೊಂಡಿದ್ದು ಎಲ್ಲರು ತಿರುಗಿನೋಡುವಂತೆ ಮಾಡಿದ್ದರು.
ಕೇವಲ ಹಾಲು ಕರೆಯುವ ಯಂತ್ರವಲ್ಲದೆ,ಹಲವು ಆಧುನಿಕ ಆವಿಸ್ಕಾರಗಳನ್ನು ಸಂಶೋಧಿಸಿರುವ ಇವರು ರಾಷ್ಟ್ರಪತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಜೊತೆ ಹೈನುಗಾರಿಕೆಯನ್ನು ಹೆಚ್ಚಿನ ಆಸಕ್ತಿ ಹೊಂದಿರುವ ರಾಘವ ಗೌಡ ಹೈನುಗಾರಿಕೆಯನ್ನು ಆಧುನಿಕತೆಯತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ .